Advertisement

ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಟ್ರಾನ್ಸ್‌ಪಾಂಡರ್‌: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಲೋಕಾರ್ಪಣೆ

09:59 PM Dec 30, 2022 | Team Udayavani |

ಚೆನ್ನೈ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಸಹಾಯಕ್ಕಾಗಿ 4,000ಕ್ಕೂ ಹೆಚ್ಚು ದೋಣಿಗಳಿಗೆ ಇಸ್ರೋ ಅಭಿವೃದ್ಧಿಪಡಿಸಿರುವ ನವೀಕೃತ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಚಾಲನೆ ನೀಡಿದರು. ತಮಿಳುನಾಡು ಸರ್ಕಾರ ನೀಲಿ ಕ್ರಾಂತಿ ಯೋಜನೆ ಮೂಲಕ 18.01 ಕೋಟಿ ರೂ. ವೆಚ್ಚದಲ್ಲಿ 4,997 ಯಾಂತ್ರಿಕೃತ ದೋಣಿಗಳಿಗೆ ನವೀಕೃತ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸಲಾಗುತ್ತಿದೆ.

Advertisement

ತಮಿಳುನಾಡು ಸಚಿವಾಲಯದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 10 ದೋಣಿಗಳ ಮಾಲೀಕರಿಗೆ ಸಿಎಂ ಸ್ಟಾಲಿನ್‌ ಟ್ರಾನ್ಸ್‌ಪಾಂಡರ್‌ಗಳನ್ನು ಹಸ್ತಾಂತರಿಸಿದರು.

ಅನುಕೂಲವೇನು?:
ಈ ಸಾಧನವು ದ್ವಿಮುಖ ಸಂವಹನವನ್ನು ಒದಗಿಸುತ್ತದೆ ಮತ್ತು ಇದು ಮೀನುಗಾರರಿಗೆ ಮಾಹಿತಿಯನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಹಾಯ ಮಾಡುತ್ತದೆ. ಇದು ಆಳ ಸಮುದ್ರದಲ್ಲಿ ದೋಣಿಯ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಮತ್ತು ರಕ್ಷಣಾ ಪ್ರಯತ್ನಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಚಂಡಮಾರುತ ಅಥವಾ ಭಾರೀ ಮಳೆಯ ಸಮಯದಲ್ಲಿ, ಈ ಸಾಧನದ ಮೂಲಕ ಆಳವಾದ ಸಮುದ್ರದಲ್ಲಿರುವ ದೋಣಿಗಳಿಂದ ಮೀನುಗಾರಿಕೆ ಇಲಾಖೆಯ ಕೇಂದ್ರ ನಿಯಂತ್ರಣ ಕೊಠಡಿ ಮತ್ತು ದೋಣಿ ಮಾಲೀಕರಿಗೆ ಸಂದೇಶಗಳನ್ನು ರವಾನಿಸಬಹುದು. ಅಲ್ಲದೇ ಭದ್ರತಾ ಏಜೆನ್ಸಿಗಳಿಂದ ಸಂದೇಶಗಳನ್ನು ಸ್ವೀಕರಿಸಬಹುದು ಮತ್ತು ಕಳುಹಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next