Advertisement

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

10:30 PM Nov 27, 2020 | sudhir |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ಕರೆದಿದ್ದ ಅನೌಪಚಾರಿಕ ಸಭೆಯಲ್ಲಿ 10 ಮಂದಿ ಸಂಸದರು, ಒಬ್ಬ ರಾಜ್ಯಸಭಾ ಸದಸ್ಯರು ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲು ಸಹಿತ ಇತರರು ಪಕ್ಷ ಚಟುವಟಿಕೆ ಹಾಗೂ ಇತರ ಕಾರ್ಯ ನಿಮಿತ್ತ ಗೈರಾಗಿದ್ದು, ಈ ಬಗ್ಗೆ ಪೂರ್ವಮಾಹಿತಿ ನೀಡಿದ್ದರು ಎನ್ನಲಾಗಿದೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಸಂಜೆ 4ರಿಂದ 5.15ರ ವರಗೆ ಸಭೆ ನಡೆಯಿತು. ಸಂಸದರಾದ ಬಿ.ವೈ.ರಾಘವೇಂದ್ರ, ಪ್ರತಾಪ್‌ಸಿಂಹ, ಸಂಗಣ್ಣ ಕರಡಿ, ರಾಜ ಅಮರೇಶ್‌ ನಾಯಕ್‌, ಡಾ| ಉಮೇಶ್‌ ಜಾಧವ್‌, ಶಿವಕುಮಾರ್‌ ಉದಾಸಿ, ದೇವೇಂದ್ರಪ್ಪ, ಜಿ.ಎಸ್‌.ಬಸವರಾಜು, ಎ.ನಾರಾಯಣಸ್ವಾಮಿ, ಪಿ.ಸಿ. ಗದ್ದಿಗೌಡರ್‌, ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಇತರರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳ ಜಾರಿಯ ಪ್ರಗತಿ ವೇಗವನ್ನು ಹೆಚ್ಚಿಸಲು ಇನ್ನು ಮುಂದೆ ರಾಜ್ಯದ ಸಂಸದರೊಂದಿಗೆ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು (ಎಂಪಿಎಲ್‌ಎಡಿ ಫ‌ಂಡ್‌) ಮುಂದುವರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಸಂಸದರ ಪ್ರಮುಖ ಸಲಹೆ
ರಾಜ್ಯದಲ್ಲಿ ಈ ಬಾರಿ ಮೆಕ್ಕೆ ಜೋಳ, ಭತ್ತದ ಇಳುವರಿ ಹೆಚ್ಚಾಗಿದ್ದು, ಬೆಲೆ ಕುಸಿತ ತಡೆಯಲು ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ನೀಡಬೇಕು. ಸಂಸದರಿಗೆ ಕನಿಷ್ಠ 3 ಕೋಟಿ ರೂ. ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿ ಒದಗಿಸಬೇಕು. ಕಲಬುರಗಿಯ ಇಎಸ್‌ಐ ಆಸ್ಪತ್ರೆ ಉನ್ನತೀಕರಣಕ್ಕೆ 860 ಎಕರೆ ಭೂಮಿಯಿದ್ದು, 150 ಎಕರೆ ಪ್ರದೇಶದಲ್ಲಿ ಪ್ರಯೋಗಾಲಯ ಇತರ ಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು, ರಾಜ್ಯ ಅನುಮತಿ ನೀಡಬೇಕು ಸಹಿತ ಹಲವು ಸಲಹೆಗಳನ್ನು ಸಂಸದರು ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next