Advertisement

ಮೋದಿಗೆ ದೀದಿಯಿಂದ ಮಾವಿನ ಹಣ್ಣು

12:15 AM Jul 02, 2021 | Team Udayavani |

ಹೊಸದಿಲ್ಲಿ: ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣ ಪ್ರಚಾರದ ವೇಳೆ ಪ್ರಧಾನಿ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಪರಸ್ಪರ ತೀವ್ರ ವಾಗ್ಧಾಳಿ ನಡೆಸಿದ್ದು ಎಲ್ಲರಿಗೂ ನೆನಪಿದೆ.

Advertisement

ಇದೀಗ ಮಮತಾ ಅವರು ಮೋದಿಗೆ ಬಂಗಾಲದ ವಿಶೇಷ ತಳಿಯ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಇದರೊಂದಿಗೆ ಎಲ್ಲ ಕಹಿಯನ್ನು ಮರೆಯುವ ಸಂದೇಶ ನೀಡಿದ್ದಾರೆ. ಮೋದಿಗೆ ಕಳುಹಿಸಿದ ಹಣ್ಣು ಗಳಲ್ಲಿ ಬಂಗಾಲದ ಮಾಲ್ಡಾ, ಹಿಮಸಾಗರ, ಲಕ್ಷ್ಮಣಭೋಗ್‌ ತಳಿಗಳು ಮುಖ್ಯ ವಾಗಿವೆ. ಆದರೆ ಇದೇನೂ ಹೊಸ ಕ್ರಮವಲ್ಲ.

2011ರಲ್ಲಿ ಮಮತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಪ್ರಧಾನಿಯಾಗಿದ್ದವರಿಗೆ ಮಾವಿನ ಹಣ್ಣು ಕಳುಹಿಸುವ ಸಂಪ್ರದಾಯವಿಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next