Advertisement
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್ ಅವರೊಂದಿಗೆ ದೂರವಾಣಿ ಸಂಭಾಷಣೆಯನ್ನೂ ನಡೆಸಿರುವ ಬಿಎಸ್‌ವೈ, ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಶೀಘ್ರ ಒಪ್ಪಿಗೆ ದೊರೆಯದಿದ್ದರೆ ತಮ್ಮ ಉದ್ದೇಶಿತ ದಿಲ್ಲಿ ಪ್ರವಾಸದ ವೇಳೆ ಖುದ್ದಾಗಿ ಅವರನ್ನು ಭೇಟಿಯಾಗಿ ಕೋರಿಕೆ ಸಲ್ಲಿಸುವ ಚಿಂತನೆ ಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Related Articles
2020-21ನೇ ಸಾಲಿನಲ್ಲಿ ಕೇಂದ್ರೀಯ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ಮೊತ್ತ ತೀರಾ ಕಡಿಮೆ. ಹೀಗಾಗಿ ಆಯೋಗವು ಕೊರತೆಯಾಗಲಿರುವ ಮೊತ್ತವನ್ನು ವಿಶೇಷ ಅನುದಾನ ರೂಪದಲ್ಲಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಇದನ್ನು ತಿರಸ್ಕರಿಸಿ, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಸೂಚಿಸಿದೆ.
Advertisement
ವರದಿ ಪ್ರಕಟಿಸಿದ್ದ “ಉದಯವಾಣಿ’ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂಬ ಆಯೋಗದ ಶಿಫಾರಸನ್ನು ಕೇಂದ್ರವು ತಿರಸ್ಕರಿಸಿ ಪುನರ್ ಪರಿಶೀಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ವಿಶೇಷ ಅನುದಾನ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿರುವ ಬಗ್ಗೆ “ಉದಯವಾಣಿ’ ಫೆ. 5ರಂದು ವಿಶೇಷ ವರದಿ ಪ್ರಕಟಿಸಿತ್ತು. - ಎಂ. ಕೀರ್ತಿಪ್ರಸಾದ್