Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “104 ಸ್ಥಾನ ಪಡೆದ ಬಿಜೆಪಿ ವಿರೋಧ ಪಕ್ಷದಲ್ಲಿದೆ. ಆದರೆ, ಅತ್ಯಂತ ಕಡಿಮೆ ಸ್ಥಾನ ಪಡೆದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ಅಧಿಕಾರ ಹಿಡಿದಿವೆ. ಡಿಕೆಶಿ ಹಾಗೂ ಎಚ್‌ಡಿಕೆ ಇದೀಗ ಅಧಿಕಾರ ದಾಹದಿಂದ ಜೋಡಿಯಾಗಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ನಾನು, ಡಿಕೆಶಿ ಜೋಡೆತ್ತುಗಳು ಎಂದು ಬಣ್ಣಿಸಿಕೊಂಡಿದ್ದಾರೆ. ಆದರೆ, ಇವರಿಬ್ಬರು ಕಳ್ಳೆತ್ತುಗಳು’ ಎಂದು ಟೀಕಿಸಿದರು.