Advertisement

ನಾಯ್ಡು ಕಟ್ಟಿಸಿದ್ದ ಭವನ ಕೆಡವಿದ ಸಿಎಂ ಜಗನ್‌

02:27 AM Jun 27, 2019 | Team Udayavani |

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ದ್ವೇಷ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಟ್ಟಿಸಿದ್ದ ಭವನ ಉರುಳಿದೆ. ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಲಾಗಿದ್ದ ‘ಪ್ರಜಾ ವೇದಿಕೆ’ ಭವನವನ್ನು ಅಕ್ರಮ ಕಟ್ಟಡ ಎಂದು ಗುರುತಿಸಲಾಗಿದ್ದು, ಜಗನ್‌ಮೋಹನ ರೆಡ್ಡಿ ಸರಕಾರ ಕೆಡವಿದೆ. ಮಂಗಳವಾರ ರಾತ್ರಿಯಿಂದಲೇ ನಡೆದ ಕಾರ್ಯಾಚರಣೆಯಲ್ಲಿ 8 ಕೋಟಿ ರೂ. ವೆಚ್ಚದ ಈ ಕಟ್ಟಡವನ್ನು ಉರುಳಿಸಲಾಗಿದೆ. ಈ ಮಧ್ಯೆ ಈ ಕಟ್ಟಡದ ಸಮೀಪದಲ್ಲೇ ಇರುವ ನಾಯ್ಡು ನಿವಾಸವನ್ನೂ ಉರುಳಿಸುವ ಭೀತಿ ಎದುರಾಗಿದ್ದು, ಈ ಕಟ್ಟಡವೂ ಅಕ್ರಮ ಎಂದು ಸರಕಾರ ಹೇಳಿದೆ.

Advertisement

ಪ್ರಜಾ ವೇದಿಕೆ ಕಟ್ಟಡವನ್ನು ನಾಯ್ಡು ಸರಕಾರ ನಿರ್ಮಿಸಿತ್ತು. ಈ ಭವನದಲ್ಲಿ ದೂರದ ಊರುಗಳಿಂದ ಆಗಮಿಸುವ ರೈತರನ್ನು ನಾಯ್ಡು ಭೇಟಿ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next