Advertisement
ಈ ಹಿನ್ನೆಲೆಯಲ್ಲಿ ಶಕ್ತಿಸೌಧಕ್ಕೆ ಸಚಿವರು ಹಾಗೂ ಅಧಿಕಾರಿಗಳ ದಂಡು ಆಗಮಿಸಿದ್ದು, ಎರಡು ತಿಂಗಳ ಬಳಿಕ ವಿಧಾನಸೌಧ ಕಳೆಗಟ್ಟಿದೆ.
Related Articles
ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಗೆ ನೀಡಿದ ತೆರಿಗೆ ಸಂಗ್ರಹಣೆ ಗುರಿ ಶೇ. 110 ಸಾಧನೆಯಾಗಿದೆ. ಆಡಳಿತ ಸುಧಾರಣ ಕ್ರಮಗಳ ಮೂಲಕ ಇನ್ನಷ್ಟು ಹೆಚ್ಚಳ ಸಾಧ್ಯವಿದೆ. ಇದರ ಜತೆಗೆ ಮಾರ್ಗದರ್ಶಿ ದರ ಪರಿಷ್ಕರಣೆ ಬಗ್ಗೆ, ಇನ್ನಷ್ಟು ತೆರಿಗೆ ಸಂಗ್ರಹ ಮಾಡುವ ಸಾಧ್ಯತೆಯ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಹೀಗಾಗಿ ಕಂದಾಯ ಇಲಾಖೆ ಮಾರ್ಗಸೂಚಿ ದರ ಮತ್ತೆ ಪರಿಷ್ಕರಣೆಯಾಗಬಹುದೇ ಎಂಬ ಅನುಮಾನ ಮೂಡಿದೆ.
Advertisement
2023-24ರಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿಗೆ ಪ್ರತಿಯಾಗಿ 20,287.30 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಜಿಐಎಸ್ ಆಧಾರಿತ ಆಸ್ತಿಗಳ ವಿವರ ಹಾಗೂ ಮಾರ್ಗಸೂಚಿ ದರ ನಿಗದಿ ಮಾಡುವುದರಿಂದ ರಾಜಸ್ವ ಸೋರಿಕೆ ತಡೆಗಟ್ಟಲು ಸಾಧ್ಯವಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾವಿಸಿದ್ದಾರೆ.
ಸೌಲಭ್ಯ ಹೆಚ್ಚಿಸಿಇದೇ ವೇಳೆ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ನಾಗರಿಕ ಸೌಲಭ್ಯ ಹೆಚ್ಚಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ದಸ್ತಾವೇಜುಗಳ ನೋಂದಣಿಯನ್ನು ಡಿಜಿಟಲೀಕರಣಗೊಳಿಸಲು ಕಾಯ್ದೆ ತಿದ್ದುಪಡಿ ಮಾಡುವ ಬಗ್ಗೆಯೂ ಸೂಚನೆ ನೀಡಲಾಗಿದೆ.