ವಿಜಯಪುರ: ಉರಿಗೌಡ, ನಂಜೇಗೌಡ ಕಾಲ್ಪನಿಕ ಕಥೆಗಳನ್ನು ಸೃಷ್ಟಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಕ್ಕಲಿಗರು ಹಾಗೂ ಮುಸ್ಲಿಮರ ಮಧ್ಯೆ ಎತ್ತಿಕಟ್ಟುವ ಕುತಂತ್ರ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ. ಇಬ್ರಾಹಿಂ ಹರಿಹಾಯ್ದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಒಕ್ಕಲಿಗರು, ಮುಸ್ಲಿಮ ಸಮುದಾಯದವರ ಮಧ್ಯೆ ಒಗ್ಗಟ್ಟು ಮುರಿಯುವ ದುರುದ್ದೇಶದಿಂದ ಈ ಸುಳ್ಳಿನ ಕಂತೆ ಸೃಷ್ಟಿಸಿದ್ದಾರೆ. ಟಿಪ್ಪು ಸುಲ್ತಾನ್ ನನ್ನು ಒಕ್ಕಲಿಗರ ಉರಿಗೌಡ-ನಂಜೇಗೌಡ ಹತ್ಯೆ ಮಾಡಿದರು ಎಂಬ ವಿಷಯ ಬಿತ್ತಲಾಗುತ್ತಿದೆ. ಚುನಾವಣಾ ರಾಜಕೀಯ ಕಾರಣಕ್ಕೆ ಸಮಾಜದಲ್ಲಿ ಒಗ್ಗಟ್ಟು ಮುರಿಯುವ ದುರುದ್ದೇಶದಿಂದ ಸಿ.ಟಿ. ರವಿ ಇಂಥ ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಸ್ಪರ್ಧಿಸುವುದು ಸೂಕ್ತ. ಬಾದಾಮಿ, ಕೋಲಾರ ಸೇರಿದಂತೆ ಇತರೆ ಯಾವ ಕ್ಷೇತ್ರಗಳೂ ಅವರಿಗೆ ಸೂಕ್ತವಲ್ಲ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ