Advertisement

ವಿಶ್ವನಾಥ್ ಸತ್ಯ ಹೇಳಿದ್ದಾರೆ, ಟಿಪ್ಪು ಬಗ್ಗೆ ಶೃಂಗೇರಿ ಶ್ರೀಗಳ ಬಳಿ ಕೇಳಿ: ಸಿಎಂ ಇಬ್ರಾಹಿಂ

04:38 PM Aug 27, 2020 | keerthan |

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಸತ್ಯವನ್ನು ಹೊರಗೆಹಾಕಿದ್ದಾರೆ. ಯಾವುದೇ ಭಯಕ್ಕೆ ಹೆದರದೆ ಹೇಳಿದ್ದಾರೆ, ಬಿಜೆಪಿಯವರಿಗೆ ಶೃಂಗೇರಿ ಶ್ರೀಗಳ ಬಗ್ಗೆ ನಂಬಿಕೆಯಿದೆಯಲ್ಲ ಆ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಹೇಳಿದರು.

Advertisement

ನಂಜನಗೂಡು ದೇಗುಲದಲ್ಲಿ ಟಿಪ್ಪು ಸುಲ್ತಾನ್ ಹೇಗೆ ನಡೆದುಕೊಂಡರು. ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಇವತ್ತಿಗೂ ಮಂಗಳಾರತಿ ನಡೆಯುತ್ತದೆ. ನಂತರ ಶ್ರೀಕಂಠೇಶ್ವರನಿಗೆ ಪೂಜೆಯಾಗುತ್ತದೆ. ಶೃಂಗೇರಿಯಲ್ಲಿ ಒಂದು ಸಾವಿರ ಬ್ರಾಹ್ಮಣರ ಊಟಕ್ಕೆ ಹಣ ಟಿಪ್ಪು ಖಜಾನೆಯಿಂದ ಹೋಗುತ್ತಿತ್ತು ಎಂದ ಅವರು, ಮಲಗಿದವರನ್ನು ಎಬ್ಬಿಸಬಹುದು. ಕಣ್ಣು ಮುಚ್ಚಿಕುಳಿತವರನ್ನು ಎಬ್ಬಿಸೋದು ಕಷ್ಟ ಎಂದು ಟೀಕಿಸಿದರು.

ಮತ್ತೆ ಟಿಪ್ಪು ವಿಷಯವನ್ನು ತೆಗೆದು ರಾಜಕಾರಣ ಮಾಡುವುದು ಬೇಡ. ಕಿಡಿಗೇಡಿಗಳು ಎಲ್ಲ ಸಮಾಜದಲ್ಲೂ ಇದ್ದಾರೆ. ಹಿಂದೂಗಳಲ್ಲೂ ಇದ್ದಾರೆ, ಮುಸ್ಲಿಂರಲ್ಲೂ ಇದ್ದಾರೆ. ಯಾರೋ ಒಬ್ಬರು ಮಾಡಿದ್ದಕ್ಕೆ ಎಲ್ಲರಿಗೆ ಅಂಟಿಸೋದು ಬೇಡ. ಯಾರ ಹೃದಯ ಚೆನ್ನಾಗಿದೆ ಅವರಿಗೆ ಟಿಪ್ಪು ಚೆನ್ನಾಗಿದ್ದಾನೆ. ಯಾರಿಗೆ ಜಾತಿ ವೈರಸ್ ಇದೆಯೋ ಅವರಿಗೆ ಟಿಪ್ಪು ವಿರೋಧಿಯಾಗಿದ್ದಾನೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿ.ಎಂ.ಇಬ್ರಾಹಿಂ ಟೀಕಿಸಿದರು.

ಇದನ್ನೂ ಓದಿ: ಟಿಪ್ಪು ನೆಲದ ಮಗ ಎಂದು ವಿಶ್ವನಾಥ್ ಹೇಳಿರುವುದು ಸತ್ಯ: ಸಂಸದ ಡಿ ಕೆ ಸುರೇಶ್

ಬಿಜೆಪಿಯವರು ಇಲ್ಲಿ ಸ್ಟೇಟ್ ಮೆಂಟ್ ಕೊಡುವುದು ಬೇಡ ಆ “ನಡ್ಡಾ ಪಡ್ಡಾ” ಮುಂದೆ ಮಾತನಾಡಲಿ. ಕೆರೆಯಲ್ಲಿ ಈಜುವುದು ಬೇಡ, ಸಮುದ್ರದಲ್ಲಿ ಈಜಿ ಎಂದು ಇಬ್ರಾಹಿಂ ಲೇವಡಿ ಮಾಡಿದರು.

Advertisement

ಹೆಚ್.ವಿಶ್ವನಾಥ್ ಟಿಪ್ಪು ಹೊಗಳಿದ ವಿಚಾರಕ್ಕೆ ಪ್ರತಿಕ್ರಯಿಸದ ಅವರು, ವಿಶ್ವನಾಥ್ ಮೈಸೂರಿನವರು. ಪುಸ್ತಕ ಬರೆದವರು. ಇತಿಹಾಸ ಅರಿತವರು. ಅವರು ಯಾವ ಪಾರ್ಟಿಯಲ್ಲಿದ್ದಾರೆ ಬೇಕಿಲ್ಲ. ಯಡಿಯೂರಪ್ಪನವರೇ ಟಿಪ್ಪು ಹೊಗಳಿದ್ದಾರೆ. ರಾಷ್ಟ್ರಪತಿಗಳೂ ಟಿಪ್ಪು ಗುಣಗಾನ ಮಾಡಿದ್ದರು ಎಂದರು.

ಇದನ್ನೂ ಓದಿ:  ಸ್ಯಾಂಡಲ್ ವುಡ್ ನಲ್ಲಿ ನಶೆ ನಂಜು: ನಟ, ಗಾಯಕರಿಗೆ ಮಾದಕ ವಸ್ತು ನೀಡುತ್ತಿದ್ದ ಗ್ಯಾಂಗ್ ಬಂಧನ

ಹೆಚ್.ವಿಶ್ವನಾಥ್ ಸಚಿವರಾಗಬೇಕು. ಇದು ನನ್ನ ಆಸೆಯೂ ಹೌದು. ಸುಮ್ಮನೆ ಬಿಜೆಪಿಯವರು ಎಂದು ವಿರೋಧ ಮಾಡೋದಲ್ಲ. ಸುರೇಶ್ ಕುಮಾರ್ ನನ್ನ ಜೈಲ್ ಮೇಟ್. ಅವರ ಬಗ್ಗೆ ನನಗೆ ಪ್ರೀತಿಯಿದೆ. ನಾನು ಪಕ್ಷಾತೀತ ರಾಜಕಾರಣ ಮಾಡುವವನು. ಸುರೇಶ್ ಕುಮಾರ್ ಮೇಲೆಪಠ್ಯದಿಂದ ಟಿಪ್ಪು ಕೈಬಿಡುವುದಕ್ಕೆ ಒತ್ತಡವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next