ಮೈಸೂರು: ಪ್ರತಾಪ್ ಸಿಂಹನಿಗೆ ಏನೂ ಗೊತ್ತಿಲ್ಲ. ಎಲ್ಲೋ ಬರೆದುಕೊಂಡು ಕುಳಿತಿದ್ದ. ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಹಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪಿನಿಂದ ಎರಡು ಬಾರಿ ಸಂಸದರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮತ್ತು ಕೃಷ್ಣರಾಜ ಒಡೆಯರ್ ಅವರಿಗೂ ತಂದಿಡುವ ಕೆಲಸವನ್ನು ಪ್ರತಾಪ್ ಸಿಂಹ ಮಾಡುತ್ತಿದ್ದಾರೆ. ಮೈಸೂರು ಸಂಸ್ಥಾನದವರು ಟಿಪ್ಪು ಸುಲ್ತಾನ್ ಸಮಾಧಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ರಾಜ-ರಾಜರಲ್ಲಿ ಒಳ್ಳೆಯ ಸಂಬಂಧ ಇಂದಿಗೂ ಇದೆ. ಕೃಷ್ಣರಾಜ ಒಡೆಯರ್ ಹಿಂದುಳಿದ ಜನರಿಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ ಎಂದರು.
ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಹುಲಿಯ ಜೊತೆ ತೋರಿಸಿದ್ದಾರೆ. ಹಾಗಾದರೆ ಹಿಂದಿನ ಕಾಲದಲ್ಲಿ ಫೋಟೊಗ್ರಫಿ ಇತ್ತೇ? ಹುಲಿನ ಹೊಡೆಯಲು ಹೋಗಿರುವುದನ್ನು ಯಾರಾದರು ಫೋಟೊ ತೆಗೆದಿದ್ದಾರಾ? ಯಡಿಯೂರಪ್ಪನನ್ನು ಹುಲಿಯಾ, ರಾಜಾ ಹುಲಿ ಎನ್ನುತ್ತೇವೆ. ಹಾಗಾದರೆ ಅವರು ಕಾಡಿನಲ್ಲಿದ್ದರಾ? ಒಬ್ಬ ಸಂಸದರಾಗಿ ಏನು ಮಾತನಾಡಬೇಕೆಂಬ ಪ್ರಜ್ಞೆ ಇಲ್ಲ ಎಂದು ಇಬ್ರಾಹಿಂ ಹೇಳಿದರು.
ಪರಿಷತ್ ನಲ್ಲಿ ಶರವಣ ಅವರಿಗೆ ಟಿಕೆಟ್ ನೀಡಿದ ವಿಚಾರವಾಗಿ ಮಾತನಾಡಿದ ಸಿ.ಎಂ.ಇಬ್ರಾಹಿಂ, ನಮ್ಮ ಪಕ್ಷದಲ್ಲಿ ಏನೂ ಗಲಾಟೆ ನಡೆದಿಲ್ಲಾ. ನಾನೇ ಟಿಕೆಟ್ ಕೇಳಲಿಲ್ಲಾ. ನಾನು ಪಕ್ಷದ ಅಧ್ಯಕ್ಷನಾಗಿ ಟಿಕೆಟ್ ಕೇಳುವುದು ಸರಿಯಲ್ಲಾ. ನಾವೆಲ್ಲಾ ಕುಳಿತು ಚರ್ಚೆಸಿ ಶರವಣ ಅವರಿಗೆ ಟಿಕೆಟ್ ನೀಡಿದ್ದೇವೆ. ಪಕ್ಷದ ಕಟ್ಟಡವೇ ನನ್ನ ಕೈಲ್ಲಿದೆ. ರೂಂಗೆ ಯಾಕೆ ಹುಡುಕಲಿ ಎಂದರು.
Related Articles
ಇದನ್ನೂ ಓದಿ:ಕಡೂರು: ಬೈಕ್ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಪುಡಿಗಟ್ಟಿದ ಪೊಲೀಸರು !
ಮರಿತಿಬ್ಬೇ ಗೌಡರ ಜೊತೆ ನಾನು ಮಾತನಾಡುತ್ತೇನೆ. ಮನೆಯಲ್ಲಿದ್ದಾಗ ಜಗಳ ನಡೆಯುವುದು ಸಹಜ. ಮುಂದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಜಿ.ಟಿ.ದೇವೇಗೌಡರ ಜೊತೆಯೂ ಮಾತನಾಡುತ್ತೇನೆ. ಮೈಸೂರಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ರಾಜಾಹುಲಿಗೆ ಮಗನಿಗೆ ಒಂದು ಸೀಟ್ ಕೊಡಿಸಲು ಆಗಲಿಲ್ಲಾ. ಯಡಿಯೂರಪ್ಪನವರಿಗೆ ಇದಕ್ಕಿಂತ ಅವಮಾನ ಇನ್ನೇನು ಬೇಕು. ಯಡಿಯೂರಪ್ಪ ಬಿಜೆಪಿಯನ್ನ ಕಟ್ಟಿದ್ದವರು ಎಂದ ಇಬ್ರಾಹಿಂ, ನಾನು ಸಂತೋಷ್ ಅವರನ್ನು ಅಭಿನಂದಿಸುತ್ತೇನೆ. ಅವರು ಆರ್ ಎಸ್ಎಸ್ ನವರೇ ಇರಬಹುದು. ಆದರೆ ಹುಡುಕಿ ಹುಡುಕಿ ಕಾರ್ತಕರ್ತರಿಗೆ ಅಧಿಕಾರ ನೀಡುತ್ತಿದ್ದಾರೆ. ದುಡ್ಡಿದವರಿಗೆ ಮಣೆ ಹಾಕುತ್ತಿಲ್ಲಾ. ಅದು ಕೇಶವ ಕೃಪ ನಮ್ಮದು ಬಸವ ಕೃಪ ಅದೇ ನಮಗೂ ಅವರಿಗೆ ಇರುವ ವ್ಯತ್ಯಾಸ ಎಂದರು.