Advertisement

ಗಡಿ ವಿವಾದ ಇತ್ಯರ್ಥ : ಸರ್ವ ಪಕ್ಷ ಸಭೆ ಕರೆದ ಆಸ್ಸಾಂ ಸಿಎಂ

01:45 PM Jan 19, 2022 | Team Udayavani |

ಗವಾಹಟಿ : ಮೇಘಾಲಯದ ಜತೆಗಿನ ಗಡಿ ವಿವಾದ ಇತ್ಯರ್ಥಗೊಳಿಸಿಕೊಳ್ಳುವುದಕ್ಕಾಗಿ ಆಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಸರ್ವಪಕ್ಷ ಸಭೆ ಕರೆದಿದ್ದಾರೆ.

Advertisement

ಮೇಘಾಲಯ ಹಾಗೂ ಅಸ್ಸಾಂನ 12 ವಿವಾದಿತ ಗಡಿ ಪ್ರದೇಶಗಳ ಬಗ್ಗೆ ಬಹು ವರ್ಷಗಳಿಂದ ಉಭಯ ರಾಜ್ಯಗಳ ಮಧ್ಯೆ ವಿವಾದವಿದೆ. ಈ ಪೈಕಿ ಆರು ಗಡಿಗಳ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಿಎಂ ಶರ್ಮಾ ಎಲ್ಲ ಪಕ್ಷಗಳ ಮುಖಂಡರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಹಹೀಮ್, ಗಿಜಾಂಗ್, ತರ್ಬಾರಿ, ಬೋಕ್ಲಾಪುರ, ಖನ್‌ಪರ್-ಪಿಲ್ಲಾಂಘಕಟ್, ರಥಚೇರಾ ಪ್ರದೇಶದ ಇತ್ಯರ್ಥಕ್ಕೆ ನಾವು ಸಿದ್ದವಿದ್ದೇವೆ. ಈ ಸಂಬAಧ ಉಭಯ ರಾಜ್ಯಗಳು ಮೂರು ಪ್ರಾದೇಶಿಕ ಸಮಿತಿಯನ್ನು ನಿರ್ಮಾಣ ಮಾಡಿವೆ. ಆದಷ್ಟು ಶೀಘ್ರ ವಿವಾದ ಇತ್ಯರ್ಥಗೊಳಿಸಿಕೊಳ್ಳುವುದು ನಮ್ಮ ಉದ್ದೇಶ ಎಂದು ಸಭೆಗೂ ಮುನ್ನ ಬಿಸ್ವಾ ಹೇಳಿದ್ದಾರೆ.

ಗಡಿ ವಿವಾದ ಇತ್ಯರ್ಥಕ್ಕೆ ಬಿಸ್ವಾ ನೀಡುತ್ತಿರುವ ಆದ್ಯತೆಗೆ ಆಸ್ಸಾಂನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರಾಜಕೀಯ ಕಾರಣಗಳಿಂದ ಹಲವು ದಶಕಗಳಿಂದ ವಿವಾದ ಬಾಕಿ ಇರುವುದು ಆಸ್ಸಾಂ ಹಾಗೂ ಮೇಘಾಲಯದ ಜನರಲ್ಲಿ ಬೇಸರ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next