Advertisement

ಕಾಂಗ್ರೆಸ್‌ನಿಂದಲೇ ಸಿಎಂ!

06:00 AM Oct 29, 2018 | Team Udayavani |

ಬಾಗಲಕೋಟೆ: ಉಪ ಚುನಾವಣೆ ಸಮರ ಕಾವೇರಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ರಚನೆಗೆ  ಸಖ್ಯ ಬೆಳೆಸಿರುವ ಜೆಡಿಎಸ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ. “ಕಾಂಗ್ರೆಸ್‌ ಪಕ್ಷ ಸೇರಿದ್ದರಿಂದಲೇ ಈ ರಾಜ್ಯದ ಸಿಎಂ ಆದೆ. ಸೋನಿಯಾ, ರಾಹುಲ್‌ ವಿಶ್ವಾಸವಿಟ್ಟು ನನ್ನನ್ನು ಸಿಎಂ ಮಾಡಿದರು’ ಎಂದು ಹೇಳುವ ಮೂಲಕ ಜೆಡಿಎಸ್‌ನಲ್ಲಿದ್ದಿದ್ದರೆ ಮೂಲೆಗುಂಪಾಗುತ್ತಿದ್ದೆ ಎಂದು ಟಾಂಗ್‌ ನೀಡಿದ್ದಾರೆ.

Advertisement

ಜಮಖಂಡಿ ಉಪಚುನಾವಣೆ ಹಿನ್ನೆಲೆಯಲ್ಲಿ ಕುರುಬ ಸಮಾಜದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಕಾಂಗ್ರೆಸ್‌ ಪಕ್ಷ ಸೇರಿದ್ದರಿಂದಲೇ ಈ ರಾಜ್ಯದ ಮುಖ್ಯಮಂತ್ರಿಯಾದೆ. ಸೋನಿಯಾ, ರಾಹುಲ್‌ ಗಾಂಧಿ ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯದ ಮುಖ್ಯಮಂತ್ರಿ ಮಾಡಿದರು. ಐದು ವರ್ಷ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಯೋಜನೆ ಜಾರಿಗೊಳಿಸಿದೆ. ಆದರೆ, ನಾನು ಮತ್ತೂಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಬಾರದು ಎಂಬ ಹೊಟ್ಟೆಕಿಚ್ಚಿನಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲಾಯಿತು ಎಂದರು. ಕುರುಬ ಸಮಾಜದಲ್ಲಿ ನನ್ನನ್ನು ಬಿಟ್ಟು ಯಾರಾದ್ರೂ ಸಿಎಂ ಆಗುತ್ತಿದ್ರಾ. ನಾನೇ ಸಿಎಂ ಆಗಬೇಕೆಂದು ಶಾಸಕರು ಬೆಂಬಲ ನೀಡಿದ್ದರು. ನಾನು ಚಾಮುಂಡೇಶ್ವರಿಯಲ್ಲಿ ಗೆದ್ದು ಮತ್ತೆ ಸಿಎಂ ಆಗುತ್ತೇನೆ ಎಂಬ ಹೊಟ್ಟೆಕಿಚ್ಚಿನಿಂದ ಸೋಲಿಸಿದರು. ಅದಕ್ಕೆ ರಾಹು, ಕೇತು, ಶನಿ ಎಲ್ಲ ಸೇರಿಕೊಂಡು ನನ್ನ ಸೋಲಿಸಿದರು ಎಂದು ಹಿಂದೆ ಹೇಳಿದ್ದೆ. ಆದರೆ, ಬಾದಾಮಿ ಕ್ಷೇತ್ರದ ಜನ ನನ್ನ ಕೈ ಹಿಡಿದರು. ನನ್ನ ರಾಜಕೀಯಕ್ಕೆ ಮತ್ತೆ ಶಕ್ತಿ ತುಂಬಿದರು ಎಂದರು.

ನನ್ನನ್ನು ಸೋಲಿಸಲು ಒಂದೇ ಕಾರಣ. ಅದು ಹೊಟ್ಟೆಕಿಚ್ಚು. ನಾನು ಮತ್ತೂಮ್ಮೆ ಸಿಎಂ ಆಗಬಾರದು ಎಂಬ ಉದ್ದೇಶದಿಂದ ಅಲ್ಲಿ ಸೋಲಿಸಲಾಯಿತು. ನಾನು ಮತ್ತೆ ಸಿಎಂ ಆಗದೇ ಇರಬಹುದು. ಆದರೆ, ರಾಜ್ಯದ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಇಂದಿಗೂ ಉಳಿಸಿಕೊಂಡಿದ್ದು, ಈ ಸಂತೋಷ ನನಗೆ ಸಾಕು. ಬಾದಾಮಿಯಲ್ಲಿ ಕೇವಲ ನಾನು ನಾಮಪತ್ರ ಸಲ್ಲಿಸಿ ಹೋಗಿದ್ದೆ. ಬಾದಾಮಿ ಜನ ನನ್ನ ಕೈ ಹಿಡಿದು ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನನ್ನ ಮೇಲಿದೆ. ಅವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next