Advertisement

ಜಾರ್ಜ್‌ ಪರ ಸಿಎಂ ಬ್ಯಾಟಿಂಗ್‌

07:00 AM Jul 10, 2018 | Team Udayavani |

ವಿಧಾನಸಭೆ: ಐಎಎಸ್‌ ಅಧಿಕಾರಿ ಡಿ.ಕೆ.ರವಿ ಹಾಗೂ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್‌ ಪರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ “ಬ್ಯಾಟಿಂಗ್‌’ ಮಾಡಿದ್ದಾರೆ.

Advertisement

ರವಿ ಆಕಸ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ವರದಿ ಬಂದಿದ್ದು, ಅದರಲ್ಲಿ ಜಾರ್ಜ್‌ ಅವರ ಪಾತ್ರ ಇಲ್ಲ ಎಂಬುದು ಸಾಬೀತಾಗಿದೆ. ಅದೇ ರೀತಿ ಗಣಪತಿ ಪ್ರಕರಣವನ್ನೂ ತನಿಖೆಗೆ ನೀಡಲಾಗಿದ್ದು, ಆ ಪ್ರಕರಣದಲ್ಲೂ ಜಾರ್ಜ್‌ ಪಾತ್ರ ಇಲ್ಲ ಎಂಬ ಮಾಹಿತಿ ಇದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವವಿಟ್ಟು ನಾವು ನಡೆದುಕೊಳ್ಳಬೇಕಾಗುತ್ತದೆ ಎಂದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಸಂದರ್ಭದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ  ಅವರು ಡಿ.ಕೆ.ರವಿ ಹಾಗೂ ಗಣಪತಿ ಪ್ರಕರಣ ಉಲ್ಲೇಖೀಸಿದ್ದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ನನ್ನ ಧ್ವನಿ ಹಾಗೂ ನಡೆಯಲ್ಲಿ ಗಡಸು ಕಡಿಮೆಯಾಗಿಲ್ಲ. ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯ ಹಾಗೂ ತನಿಖಾ ವರದಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿರುವ ಅವರು ಹಿಂದೆ ನಮ್ಮ ಒತ್ತಾಯಕ್ಕೆ ಮಣಿದು ರಾಜೀನಾಮೆ ಸಹ ನೀಡಿದ್ದರು.

ಡಿ.ಕೆ.ರವಿ ಹಾಗೂ ಡಿವೈಎಸ್‌ಪಿ ಗಣಪತಿ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಡ ಹೇರಿದ್ದು ನಾನೇ. ಪ್ರತಿಪಕ್ಷದಲ್ಲಿದ್ದು, ಆ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಅದು. ಆದರೆ, ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಬೇಕಲ್ಲವೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next