Advertisement

ಸಿಎಂ ಹಿರಿಯ ಸಹೋದರಿ ನಿಧನ

11:43 AM Oct 08, 2017 | |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿರಿಯ ಸಹೋದರಿ ಚಿಕ್ಕಮ್ಮ (90)ವಯೋಸಹಜ
ಅನಾರೋಗ್ಯದಿಂದ ಶುಕ್ರವಾರ ತಡರಾತ್ರಿ ನಿಧನರಾದರು. ಲೇ.ಸಣ್ಣೇಗೌಡರ ಪತ್ನಿಯಾದ ಚಿಕ್ಕಮ್ಮ ಅನಾರೋಗ್ಯದ
ಕಾರಣ ಕೆಲ ದಿನಗಳ ಹಿಂದೆ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಸಿದ್ದರಾಮನಹುಂಡಿ ಪಕ್ಕದ ದೇವೇಗೌಡನ ಹುಂಡಿಯಲ್ಲಿ ನೆರವೇರಿತು.

Advertisement

ಸಿಎಂ ಸಂತಾಪ: ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸಿಎಂ ಸಿದ್ದರಾಮಯ್ಯ ಅಂತ್ಯಕ್ರಿಯೆಯಲ್ಲಿ
ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಮ್ಮದು ಅವಿಭಕ್ತ ಕುಟುಂಬ. ಹೀಗಾಗಿ ನಮ್ಮ ಅಕ್ಕನ
ಮಕ್ಕಳು ದೊಡ್ಡವರಾಗುವರೆಗೂ ನಮ್ಮ ಜತೆಗೇ ಇದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಭೇಟಿ
ಮಾಡಿದ್ದೆ ಎಂದು ಸಿದ್ದರಾಮಯ್ಯ ನೆನೆದರು.

ಶಾಸಕ ಪುಟ್ಟರಂಗಶೆಟ್ಟಿ, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಾಜಿ ಶಾಸಕ ಸತ್ಯನಾರಾಯಣ ಮತ್ತಿತರರು ಅಂತಿಮ  ನಮನ ಸಲ್ಲಿಸಿದರು. 

ವಿಜಯಶಂಕರ್‌ ಭಾಗಿ: ಮಾಜಿ ಸಚಿವ ಸಿ.ಎಚ್‌. ವಿಜಯಶಂಕರ್‌ ಅವರು ಬಿಜೆಪಿ ತೊರೆದು ಕಾಂಗ್ರೆಸ್‌
ಸೇರ್ಪಡೆಗೊಳ್ಳುವ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿರುವ ಬೆನ್ನಲ್ಲೆ ಶನಿವಾರ ದೇವೇಗೌಡನಹುಂಡಿಯಲ್ಲಿ ಕಾಣಿಸಿಕೊಂಡರು. ಸಿಎಂ ಸಿದ್ದರಾಮಯ್ಯ ಅವರ ಸಹೋದರಿ ಚಿಕ್ಕಮ್ಮ ಅವರ ಅಂತಿಮ ದರ್ಶನ ಪಡೆದು, ಸ್ಥಳದಲ್ಲಿದ್ದ ಕೆಲವು ಕಾಂಗ್ರೆಸ್‌ ಮುಖಂಡರೊಂದಿಗೆ ಗುರುತಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next