Advertisement
ಸಾವರ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಲು ಮತ್ತು ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟೀಕೆಗಳನ್ನು ವಿರೋಧಿಸಿ ಮಹಾರಾಷ್ಟ್ರದ ಪ್ರತಿ ಜಿಲ್ಲೆಗಳಲ್ಲಿ ಸಾವರ್ಕರ್ ಗೌರವ ಯಾತ್ರೆಗಳನ್ನು ಕೈಗೊಳ್ಳಲಾಗುವುದು ಎಂದು ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ಕಳೆದ ತಿಂಗಳು ಘೋಷಿಸಿತ್ತು.
Related Articles
Advertisement
ಸಾವರ್ಕರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸುವ ಟ್ಯಾಬ್ಲೋ ಕೂಡ ಯಾತ್ರೆಯ ಭಾಗವಾಗಿತ್ತು. ಶಿಂಧೆ ಮತ್ತು ಆಡಳಿತಾರೂಢ ಶಿವಸೇನೆ-ಬಿಜೆಪಿ ಒಕ್ಕೂಟದ ಇತರ ಕೆಲವು ನಾಯಕರು ‘ರಥ’ದಲ್ಲಿ ಯಾತ್ರೆಯಲ್ಲಿ ಭಾಗವಹಿಸಿದರು ಮತ್ತು ಯಾತ್ರೆಯು ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತೆರಳುತ್ತಿದ್ದಂತೆ ನಾಗರಿಕರತ್ತ ಕೈಬೀಸಿದರು.
ಸಾವರ್ಕರ್ ಮತ್ತು ದೇಶವನ್ನು ಸ್ತುತಿಸಿ 200 ಕ್ಕೂ ಹೆಚ್ಚು ಮೋಟರ್‌ಬೈಕ್‌ಗಳು ಮತ್ತು ಸುಮಾರು 100 ಆಟೋರಿಕ್ಷಾಗಳನ್ನು ಬಳಸಿ ಥಾಣೆ ನಗರದಾದ್ಯಂತ ಸಂಚರಿಸಿದ ಅನೇಕರು ಭಾಗವಹಿಸಿದವರ ಮೇಲೆ ಪುಷ್ಪವೃಷ್ಟಿ ಮಾಡಿದರು.
ಬಿಜೆಪಿ ನಾಯಕ ಡಾ.ವಿನಯ್ ಸಹಸ್ರಬುದ್ಧೆ, ಥಾಣೆ ಶಾಸಕ ಸಂಜಯ್ ಕೇಲ್ಕರ್, ಥಾಣೆ ಬಿಜೆಪಿ ಮುಖ್ಯಸ್ಥ ಮತ್ತು ಎಂಎಲ್‌ಸಿ ನಿರಂಜನ್ ದಾವ್‌ಖರೆ, ಮಾಜಿ ಮೇಯರ್ ನರೇಶ್ ಮ್ಹಾಸ್ಕೆ, ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಮತ್ತು ಆಡಳಿತ ಸಮ್ಮಿಶ್ರ ಸರ್ಕಾರದ ಅನೇಕ ಸ್ಥಳೀಯ ನಾಯಕರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ನಗರದ ವಿವಿಧೆಡೆ ಸಾವರ್ಕರ್ ಅವರ ಬೃಹತ್ ಹೋರ್ಡಿಂಗ್‌ಗಳನ್ನು ಹಾಕಲಾಗಿತ್ತು, ಯಾತ್ರೆಯ ಸಮಯದಲ್ಲಿ ದೇಶಭಕ್ತಿ ಗೀತೆಗಳನ್ನು ನುಡಿಸಲಾಯಿತು ಮತ್ತು ವಿವಿಧ ಸ್ಥಳಗಳಲ್ಲಿ ವರ್ಣರಂಜಿತ ಮಾದರಿಗಳ ರಂಗೋಲಿಗಳನ್ನು ಬಿಡಿಸಲಾಗಿತ್ತು.ವರ್ಣರಂಜಿತ ಉಡುಗೆ ಮತ್ತು ಕಲಶಗಳನ್ನ ಹೊತ್ತ ಹಲವಾರು ಮಹಿಳೆಯರು ಯಾತ್ರೆಯಲ್ಲಿ ಭಾಗವಹಿಸಿದರು.