Advertisement

CM, ಡಿಸಿಎಂ ಇಬ್ಬರೇ ನಿರ್ಧಾರ ತೆಗೆದುಕೊಳ್ಳಬಾರದು: ಡಾ.ಜಿ. ಪರಮೇಶ್ವರ್‌

09:26 PM May 28, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿಎಂ, ಡಿಸಿಎಂ ಇಬ್ಬರೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್‌ ಆಗ್ರಹಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್‌, ಸಿಎಂ ಮತ್ತು ಡಿಸಿಎಂ ಇಬ್ಬರೂ ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ನಮ್ಮೆಲ್ಲಾ ಹಿರಿಯರನ್ನು ಸಂಪರ್ಕಿಸಿದರೆ ಸೂಕ್ತ. ಅವರಿಬ್ಬರೇ ತೀರ್ಮಾನಿಸಿದರೆ ಅದು ನನ್ನ ದೃಷ್ಟಿಯಲ್ಲಿ ಸರಿ ಕಾಣುವುದಿಲ್ಲ ಎಂದರು.

ಹಿರಿಯರು, ಅನುಭವಿಗಳು, ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಕೆಲಸ ಮಾಡಿ, ಜನಸಂಪರ್ಕದಲ್ಲಿ ಇರುವವರ ಬಳಿ ಯಾರಿಗೆ ಟಿಕೆಟ್‌ ಕೊಟ್ಟರೆ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂಬುದನ್ನು ಚರ್ಚಿಸಬೇಕು. ನಾನೊಬ್ಬನೇ ಎಂದಲ್ಲ, ನನ್ನಂತೆಯೇ ಹಿರಿಯರು ಇದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದವರು, ಅನೇಕ ಸ್ಥಾನಮಾನಗಳ ಅನುಭವ ಇರುವವರ ಸಲಹೆ-ಸೂಚನೆ ಪಡೆಯುವುದು ಬಹಳ ಒಳ್ಳೆಯದು. ಇದು ನನ್ನ ಅಭಿಪ್ರಾಯ.

ಏಕಾಏಕಿಯಾಗಿ ಇಬ್ಬರೇ ಕುಳಿತು ತೀರ್ಮಾನ ಮಾಡಬಾರದು. ಜಿಲ್ಲಾವಾರು, ಪ್ರದೇಶವಾರು, ಪಕ್ಷ ಕಟ್ಟಲು ಸಹಾಯ ಮಾಡಿದವರು ಯಾರು? ಯಾವ ಸಮುದಾಯ ಪಕ್ಷದ ಜತೆಗೆ ನಿಂತಿದೆ ಎಂಬುದನ್ನೆಲ್ಲ ಗುರುತಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next