Advertisement
ಈಗಾಗಲೇ ಕಾಂಗ್ರೆಸ್ ನಾಯಕರೇ ಹೇಳಿಕೊಂಡಂತೆ 7 ಸ್ಥಾನಗಳಿಗೆ 70 ಆಕಾಂಕ್ಷಿಗಳಿದ್ದು, ಇಷ್ಟು ಜನರಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆಂಬುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಇದರ ಬೆನ್ನಲ್ಲೇ ಈಗಾಗಲೇ ದಿಲ್ಲಿ ತಲುಪಿರುವ ಕೆಲವು ಆಕಾಂಕ್ಷಿಗಳು, ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದು, ಹಲವು ನಾಯಕರನ್ನು ಭೇಟಿ ಮಾಡಿ ಒತ್ತಡ ಕೂಡ ಹಾಕಿದ್ದಾರೆ.
Related Articles
ಇತ್ತ 3 ಸ್ಥಾನ ಗೆಲ್ಲುವ ಅವಕಾಶ ಇರುವ ಬಿಜೆಪಿಯು ಸೋಮವಾರ ಪಟ್ಟಿ ಬಿಡುಗಡೆ ಮಾಡಬಹುದೆಂದು ನಿರೀಕ್ಷೆ ಹುಸಿಯಾಗಿದ್ದು, ವರಿಷ್ಠರು ಕೈಗೆ ಸಿಗದೆ ಇರುವುದರಿಂದ ಅಭ್ಯರ್ಥಿಗಳನ್ನು ಆಖೈರುಗೊಳಿಸಲಾಗಿಲ್ಲ. ಅಲ್ಲದೆ ಇರುವ ಮೂರು ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳಿರುವುದರಿಂದ ತಲೆಬಿಸಿ ಹೆಚ್ಚಾಗಿದೆ.
Advertisement
ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ?ಅತ್ತ ಜೆಡಿಎಸ್‌ನ ಬಿ.ಎಂ. ಫಾರೂಕ್ ನಿವೃತ್ತಿಯಿಂದ ತೆರವಾಗುತ್ತಿರುವ ತಮ್ಮ ಸ್ಥಾನಕ್ಕೆ ಅವರೇ ಮರು ಆಯ್ಕೆ ಬಯಸುತ್ತಿದ್ದು, ಪಕ್ಷದ ನಾಯಕರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂಬ ಒತ್ತಡವೂ ಇದೆ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರಿಗೆ ಟಿಕೆಟ್ ಕೊಡುವ ಸಂಭವವಿದ್ದು, ಮಿತ್ರಪಕ್ಷದಿಂದ ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.