Advertisement
9 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೂರಾಡಿ-ನೀಲಾವರ ರಸ್ತೆಯ ಸೇತುವೆ, 1.50 ಕೋ. ರೂ.ಗಳ ಜಿ.ಪಂ. ತರಬೇತಿ ಕೇಂದ್ರ, 60 ಲ.ರೂ. ವೆಚ್ಚದ ಬಾರಕೂರು ಸ.ಪ್ರ.ದ. ಕಾಲೇಜಿನ ಗ್ರಂಥಾಲಯ ಕಟ್ಟಡ, 49 ಲ.ರೂ. ವೆಚ್ಚದ ಮಲ್ಪೆ 3ನೇ ಹಂತದ ಜೆಟ್ಟಿ ಕಾಮಗಾರಿ, 1.51 ಲ.ರೂ. ವೆಚ್ಚದ ಗೋಪಾಲಪುರ ವಾರ್ಡ್ ಸಂತೆಕಟ್ಟೆಯ ವಾಣಿಜ್ಯ ಸಂಕೀರ್ಣ, 3.05 ಕೋ.ರೂ. ವೆಚ್ಚದ ಕೃಷಿಕೇಂದ್ರ ರಸ್ತೆ ಅಭಿವೃದ್ಧಿ, 2.63 ಕೋ.ರೂ. ವೆಚ್ಚದ ಹೇರೂರು ಶಾಲೆ ರಸ್ತೆ ಅಭಿವೃದ್ಧಿ, 1.67 ಕೋ.ರೂ. ವೆಚ್ಚದ ಕೆಮ್ಮಣ್ಣು ಜ್ಯೋತಿನಗರ-ನೇಜಾರು 6ನೇ ಕ್ರಾಸ್ ರಸ್ತೆ ಅಭಿವೃದ್ಧಿ, 2.26 ಕೋ.ರೂ. ವೆಚ್ಚದ ನೇಜಾರು ಜಂಗಮರ ಬೆಟ್ಟುವಿನಿಂದ ನಿಡಂಬಳ್ಳಿ-ಕೆಮ್ಮಣ್ಮು ರಸ್ತೆ ಅಭಿವೃದ್ಧಿ, 1.31 ಕೋ.ರೂ. ವೆಚ್ಚದ ಕರ್ಜೆ ಹುಲವಳ್ಳಿಯಿಂದ ಇಂಕ್ಲಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ 72.54 ಕೋ.ರೂ. ವೆಚ್ಚದ ಒಟ್ಟು 10 ಕಾಮಗಾರಿಗಳನ್ನು ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
370 ಕೋ.ರೂ. ವೆಚ್ಚದ ಎಡಿಬಿ ಮತ್ತು ಅಮೃತ್ ಯೋಜನೆಯಡಿ ಉಡುಪಿ ನಗರಸಭೆಗೆ ನೀರು ಸರಬರಾಜು ಯೋಜನೆಯ ಕಾಮಗಾರಿ ಮತ್ತು ಒಳಚರಂಡಿ ಜಾಲ ವಿಸ್ತರಣೆ ಕಾಮಗಾರಿ, 35 ಕೋ.ರೂ. ವೆಚ್ಚದ ನಗರೋತ್ಥಾನ ಹಂತ 3ರ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಒಳಚರಂಡಿ ಮತ್ತು ಇತರ ಕಾಮಗಾರಿ, 10 ಕೋ.ರೂ. ವೆಚ್ಚದ ಚರಂಡಿ, ರಸ್ತೆ ಅಭಿವೃದ್ಧಿ, 3.14 ಕೋ.ರೂ. ವೆಚ್ಚದ ಮಣಿಪಾಲ ಮೆಟ್ರಿಕ್ ಅನಂತರದ
ಬಾಲಕಿಯರ ವಿದ್ಯಾರ್ಥಿನಿಲಯ ಕಾಮಗಾರಿ, 1.21 ಕೋ.ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆ, 2 ಕೋ.ರೂ. ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಜಿಮ್ನೆàಶಿಯಂ ಸ್ಥಾಪನೆ ಕಾಮಗಾರಿ, 13 ಕೋ.ರೂ. ವೆಚ್ಚದ ಆವರ್ಸೆ- ಆಮ್ರಕಲ್ – ಬೆಳ್ವೆ- ಮುದ್ದೂರು – ಮಿಯಾರು ರಸ್ತೆ ಯಲ್ಲಿ ಸೀತಾನದಿಗೆ ಸೇತುವೆ ನಿರ್ಮಾಣ, 75 ಲ.ರೂ. ವೆಚ್ಚದ ಬ್ರಹ್ಮಾವರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಕಾಮಗಾರಿ, 4 ಕೋ.ರೂ. ವೆಚ್ಚದ ಪೆರಂಪಳ್ಳಿ ಪಾಸ್‌ಕುದ್ರು ನಡುವಿನ ಎರಡು ಸೇತುವೆಗಳು, 5 ಕೋ.ರೂ. ವೆಚ್ಚದ ಕೆಮ್ಮಣ್ಣು ತಿಮ್ಮನಕುದ್ರು ಸೇತುವೆ ನಿರ್ಮಾಣ, 12 ಕೋ.ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, 3 ಕೋ.ರೂ. ವೆಚ್ಚದ ಗಾಂಧೀಭವನ ನಿರ್ಮಾಣ, 1 ಕೋ.ರೂ. ವೆಚ್ಚದ ಮಹಿಳಾ ವಸತಿ ನಿಲಯ ಕಟ್ಟಡ ಕಾಮಗಾರಿ, 2.48 ಕೋ.ರೂ. ವೆಚ್ಚದ ಬಾಯಾರು ಬೆಟ್ಟು ಗೋದನಕಟ್ಟೆ ವಯಾ ಕಕ್ಕುಂಜೆ -ಗೋರಪಳ್ಳಿ ಸೇತುವೆ, 3.26 ಕೋ.ರೂ. ವೆಚ್ಚದ ಕರ್ಜೆ-ಹಲುವಳ್ಳಿ ಯಿಂದ ಇಂಕ್ಲಾಡಿ ಸೇತುವೆ, 9.15 ಕೋ.ರೂ. ವೆಚ್ಚದ ಆರೂರು ಮೊರಾರ್ಜಿ ದೇಸಾಯಿ ಪ.ಪೂ. ವಸತಿ ಕಾಲೇಜು ಕಟ್ಟಡ ಕಾಮಗಾರಿ ಸೇರಿದಂತೆ ಒಟ್ಟು 509 ಕೋ.ರೂ ವೆಚ್ಚದ 23 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಿದ್ದರಾಮಯ್ಯ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಉಡುಪಿ ನಗರಸಭೆಗೂ 10 ಕೋ.ರೂ. ವಿಶೇಷ ಅನುದಾನ ನೀಡಿದ್ದು, ಅದರಲ್ಲಿ ಪರ್ಯಾಯೋತ್ಸವ ಕಾಮಗಾರಿಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಪ್ರಮೋದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಡುಪಿಗೆ ಬರಲಿದೆ ವಾರಾಹಿ ನೀರು
ಚುನಾವಣಾ ಪ್ರಣಾಳಿಕೆಯಲ್ಲಿ ನಿಡಿದ್ದ 24 ಗಂಟೆ ನಿರಂತರ ವಿದ್ಯುತ್ ಭರವಸೆ ಈಡೇರಿದೆ. ಇದೀಗ ಉಡುಪಿ ನಗರ ಮತ್ತು ಆಸುಪಾಸಿನ ಗ್ರಾಮಗಳಿಗೆ 24 ಗಂಟೆ ನಿರಂತರ ನೀರು ಒದಗಿಸುವ ಉದ್ದೇಶದಿಂದ ವಾರಾಹಿ ನದಿಯಿಂದ ಕುಡಿಯುವ ನೀರು ಪೂರೈಕೆ ಕಾಮಗಾರಿ 217 ಕೋ.ರೂ. ವೆಚ್ಚದಲ್ಲಿ ಆರಂಭಗೊಳ್ಳಲಿದೆ. ಈ ಕಾಮಗಾರಿಗೆ ಕೂಡ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಅಪರಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲೇ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.