Advertisement

ಸಿಎಂ ಬದಲಾವಣೆ ಹೇಳಿಕೆ ಅರ್ಥಹೀನ: ಪ್ರಹ್ಲಾದ ಜೋಶಿ

02:12 PM Aug 12, 2022 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬ ಹೇಳಿಕೆಯೇ ಅರ್ಥಹೀನ ಹಾಗೂ ಆಧಾರ ರಹಿತ ಎಂದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಯಾವ ವಿಚಾರವೇ ಇಲ್ಲದಿರುವಾಗ, ಕೆಲ ಆಧಾರ ರಹಿತ ಹೇಳಿಕೆ, ಅನಿಸಿಕೆಗಳಿಗೆ ಮಹತ್ವವೇ ಇಲ್ಲ ಎಂದರು.

ಸಿಎಂ ಬದಲಾವಣೆ ಇಲ್ಲ ಎಂಬುದನ್ನು ಈಗಾಗಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಸ್ಪಷ್ಟ ಪಡಿಸಿದ್ದಾರೆ. ರಾಜ್ಯದಲ್ಲಾಗಲಿ, ಕೇಂದ್ರದಲ್ಲಾಗಲಿ ಈ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಐದು ಬಾರಿ ಮೈತ್ರಿ ಕೂಟದ ನಿಷ್ಠೆ ಬದಲಿಸಿದ್ದು, ಈ ಬಾರಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇದನ್ನೂ ಓದಿ:ದೇಶದ ಸ್ವಾತಂತ್ರ್ಯಕ್ಕೆ ಸಿದ್ದರಾಮಯ್ಯ‌ ಕೊಡುಗೆ ಏನು?: ಸಾರಾ ಮಹೇಶ್ ವಾಗ್ದಾಳಿ

Advertisement

ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ದೇಶದ ಸುಮಾರು10 ಕೋಟಿ ಮನೆಗಳ ಮೇಲೆ ಧ್ವಜಾರೋಹಣ ಗುರಿ ಹೊಂದಲಾಗಿದೆ. ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪಾಲಿಕೆ ಸದಸ್ಯರಿಗೆ ನೀಡಲಾದ ರಾಷ್ಟ್ರಧ್ವಜಗಳಲ್ಲಿ ಬಿ.ಎಸ್.ಐ ಸ್ಟ್ಯಾಂಡರ್ಡ್ ನಿಯಮ ಉಲ್ಲಂಘನೆ ಮಾಡಲಾಗಿದೆ. ಅಲ್ಲದೇ ಕಳಪೆ ಮಟ್ಟದ ಧ್ವಜ ವಿತರಣೆ ಮಾಡಿರುವ ಕುರಿತು ತಿಳಿದುಬಂದಿದೆ. ಈ ಕುರಿತು ಧ್ವಜಗಳನ್ನು ತಯಾರಿಸಿದ ಹಾಗೂ ಅವುಗಳನ್ನು ಪರಿಶೀಲನೆ ಮಾಡದೇ ತೆಗೆದುಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ, ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಹಾಪೌರರು ಸೇರಿದಂತೆ ಬಹುತೇಕರು ಮಾತನಾಡುತ್ತಿದ್ದು, ಈ ಕುರಿತು ಆಯುಕ್ತರಿಗೆ ಸೂಚನೆ ನೀಡುತ್ತೇನೆ.  ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತು ಪಾಲಿಕೆ ಆಯುಕ್ತರಿಗೆ ಸಂಪೂರ್ಣ ಅಧಿಕಾರವಿದ್ದು ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next