Advertisement

CM ಕುರ್ಚಿ- ನಿಲ್ಲದ ಗೋಳು- ಸಿದ್ದು ಯೂಟರ್ನ್- ನೋಟಿಸ್‌ ಎಚ್ಚರಿಕೆ ನೀಡಿದ ಡಿ.ಕೆ.ಶಿ

11:06 PM Nov 03, 2023 | Team Udayavani |

ಬೆಂಗಳೂರು: ಹೈಕಮಾಂಡ್‌ ಎಚ್ಚರಿಕೆ ನೀಡಿದ ಬಳಿಕವೂ ಕಾಂಗ್ರೆಸ್‌ನಲ್ಲಿ “ಸಿಎಂ ಆಕಾಂಕ್ಷಿ’ ಅಭಿಯಾನ ತೀವ್ರಗೊಂಡಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿ ಎಂ ಡಿ.ಕೆ. ಶಿವಕುಮಾರ್‌ ಅವರನ್ನು ಮೀರಿಸುವ ರೀತಿಯಲ್ಲಿ ದಿನಕ್ಕೊಬ್ಬರು ಆಕಾಂಕ್ಷಿಗಳು ಸೃಷ್ಟಿಯಾಗುತ್ತಿದ್ದಾರೆ. “ನಾನೇ ಸಿಎಂ’ ಎಂಬುದು ಸರಕಾರಕ್ಕೆ ನಿತ್ಯದ ಗೋಳಾಗಿ ಪರಿಣಮಿಸಿದೆ.

Advertisement

ಹೈಕಮಾಂಡ್‌ ಎಚ್ಚರಿಕೆ ಬಳಿಕ ಅಧಿಕಾರ ಹಸ್ತಾಂ ತರ ವಿವಾದ ಸ್ತಬ್ಧವಾಗಲಿದೆ ಎಂದು ನಿರೀಕ್ಷಿಸ ಲಾಗಿತ್ತು. ಆದರೆ ಸ್ವತಃ ಸಿದ್ದರಾಮಯ್ಯನವರು “ನಾನೇ ಐದು ವರ್ಷ ಸಿಎಂ’ ಎಂದು ಹೊಸಪೇಟೆ ಯಲ್ಲಿ ಹೇಳಿಕೆ ನೀಡಿದ ಬಳಿಕ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಈ ಮಧ್ಯೆ “ಬಹಿರಂಗ ಹೇಳಿಕೆ ನೀಡುವವರಿಗೆ ನೋಟಿಸ್‌ ನೀಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದರೂ ಸಚಿವ ಕೆ.ಎನ್‌. ರಾಜಣ್ಣ ಅವರು ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರಿಗೂ ಮುಖ್ಯಮಂತ್ರಿಯಾಗುವ ಅದೃಷ್ಟವಿದೆ ಎಂಬ ಹೇಳಿಕೆ ನೀಡಿ “ದಲಿತ ಸಿಎಂ’ ವಾದಕ್ಕೆ ಪುಷ್ಟಿ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‌ ಬೆಂಬಲಿಗರ ಮಧ್ಯೆ ಇದು ವಾಗ್ವಾದ ವನ್ನೇ ಸೃಷ್ಟಿಸಿದ್ದು, ಹುಬ್ಬಳ್ಳಿಯಲ್ಲಿ ಶಿವಕುಮಾರ್‌ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆಯನ್ನು ಕಾರ್ಯಕರ್ತರು ಮೊಳಗಿಸಿದ್ದಾರೆ. ಇದರ ಜತೆಗೆ ದಲಿತ ಸಿಎಂ ರೇಸ್‌ನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ತಮ್ಮನ್ನು ಸ್ವಯಂ ಪ್ರತಿಷ್ಠಾಪಿಸಿಕೊಂಡಿದ್ದು, “ಹೈಕಮಾಂಡ್‌ ನೀವೇ ಸಿಎಂ ಎಂದರೆ ತಾವು ಸಿದ್ಧ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದೆಲ್ಲದರ ಮಧ್ಯೆ ಗುರುವಾರ ತಾವು ನೀಡಿದ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಯೂಟರ್ನ್ ಹೊಡೆದಿದ್ದಾರೆ.

ಪರಂಗೆ ಅದೃಷ್ಟವಿದೆ
ಸಿದ್ದರಾಮಯ್ಯ ಅವರಿಗೆ ಸಾಕು ಎನ್ನಿಸಿದ ದಿನ ಡಾ| ಜಿ. ಪರಮೇಶ್ವರ್‌ ಮುಖ್ಯಮಂತ್ರಿ ಅಗಬೇಕು. ಅವರಿಗೂ ಸಿಎಂ ಆಗುವ ಅದೃಷ್ಟವಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟು ಹಾಕಿದ್ದಾರೆ.
ತುಮಕೂರು ನಗರದಲ್ಲಿ 72 ಪೊಲೀಸ್‌ ವಸತಿ ಗೃಹಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ನಾನಂತೂ ಚುನಾವಣೆಗೆ ನಿಲ್ಲುವುದಿಲ್ಲ.

ಇಲ್ಲದ ವಿಷಯ ಸೃಷ್ಟಿ : ಡಿ.ಕೆ. ಶಿವಕುಮಾರ್‌ ಎಚ್ಚರಿಕೆ
ಈ ಮಧ್ಯೆ ಪಕ್ಷದ ಸೂಚನೆ ಮೀರಿ ಮಾತ ನಾಡಿ ದವರಿಗೆ ನೋಟಿಸ್‌ ನೀಡು ತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎಚ್ಚರಿಕೆಯ ಸಂದೇಶ ನೀಡಿದರು. ಹುಬ್ಬಳ್ಳಿ ಪ್ರವಾಸಿ ಮಂದಿರದ ಬಳಿ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಮಾಡಿದ ಅನಂತರ ನಾನು, ಸಿಎಂ ಇಬ್ಬರೂ ಸೇರಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಸುಮ್ಮನೆ ಏಕೆ ಇಲ್ಲದ ವಿಷಯ ನೀವೇ ಸೃಷ್ಟಿ ಮಾಡಿಕೊಳ್ಳುತ್ತೀರಿ? ಇದೆಲ್ಲ ಅಗತ್ಯವಿಲ್ಲ ಎಂದರು.

Advertisement

ಪಕ್ಷ ಹಾಗೂ ಸರಕಾರದಲ್ಲಿ ಯಾವುದೇ ಗೊಂದಲ ಇಲ್ಲ. ವಿಪಕ್ಷ ನಾಯಕರನ್ನು ನೇಮಕ ಮಾಡಲು ಸಾಧ್ಯ ವಾಗದ ಬಿಜೆಪಿ ತನ್ನ ಹುಳುಕು ಮುಚ್ಚಿ ಕೊಳ್ಳಲು ದಿನಕ್ಕೊಂದು ಸುಳ್ಳು ಹರಡುತ್ತಿದೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಹೈಕಮಾಂಡ್‌ ಇದೆ. ಎಲ್ಲ ವನ್ನೂ ಹೈಕಮಾಂಡ್‌ ನೋಡಿಕೊಳ್ಳು ತ್ತದೆ. ಈ ಕುರಿತು ಹೆಚ್ಚು ಮಾತನಾಡುವುದಿಲ್ಲ.
– ಮಧು ಬಂಗಾರಪ್ಪ , ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next