Advertisement

ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೂ ವಿಶ್ವಾಸ ಬರುತ್ತೆ: BSY

02:22 PM Sep 25, 2020 | keerthan |

ಬೆಂಗಳೂರು: ಕಾಂಗ್ರೆಸ್ ನವರು ಪ್ರತಿ ಆರು ತಿಂಗಳಿಗೊಮ್ಮೆ ಹೀಗೆ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಾ ಇರಲಿ. ಇದರಿಂದ ನನಗೂ ಆರು ತಿಂಗಳ ಕಾಲ ವಿಶ್ವಾಸ ಬರುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಅವಿಶ್ವಾಸ ನಿರ್ಣಯ ಮಂಡನೆ ಮಾಡುವುದರಿಂದ ನನಗೆ ಆರು ತಿಂಗಳ ಕಾಲ ವಿಶ್ವಾಸ ಬರುತ್ತದೆ. ನನಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ರೈತರ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ಇವತ್ತು ಕರೆದು ರೈತರ ಜೊತೆ ಚರ್ಚೆ ಮಾಡುತ್ತೇನೆ. ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆ ಆಗಲ್ಲ. ನೀರಾವರಿ ಜಮೀನು ಖರೀದಿ ಮಾಡಿದವರು ಅದನ್ನು ನೀರಾವರಿಗೆ ಬಳಸಬೇಕು ಅಂತಾ ಷರತ್ತು ಹಾಕಿದ್ದೇವೆ. ಕೈಗಾರಿಕೆಗಳಿಗೋಸ್ಕರ ನಮ್ಮ ರಾಜ್ಯದಲ್ಲಿ ಬಳಸಿರುವುದು ಕೇವಲ ಶೇ 2 ರಷ್ಟು ಜಮೀನು ಮಾತ್ರ ಎಂದರು

Advertisement

Udayavani is now on Telegram. Click here to join our channel and stay updated with the latest news.

Next