Advertisement

ಕೋವಿಡ್ ಮಣಿಸಲು ಲಸಿಕೆ ಅಗತ್ಯ : ಸಿಎಂ ಬಿ ಎಸ್ ವೈ ಮನವಿ

10:51 AM Mar 19, 2021 | Team Udayavani |

ಬೆಂಗಳೂರು : ದೇಶದಲ್ಲಿ ರೂಪಾಂತರಿ ಕೋವಿಡ್ ಮಾರಣಾಂತಿಕ ವೈರಸ್ ನ ಅಲೆಯ ಕಾರಣದಿಂದಾಗಿ ಕರ್ನಾಟಕ ಸೇರಿ ದೇಶದ ಕೆಲವು ರಾಜ್ಯಗಳಲ್ಲಿ ಮತ್ತೆ ಕೋವಿಡ್ ಸೋಂಕಿನ ಸಂಖ್ಯೆ ಮೇಲ್ಮುಖ ಕಾಣುತ್ತಿರುವಾಗ ಜನರಲ್ಲಿ ಮತ್ತೆ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗುತ್ತದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.

Advertisement

ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸದ್ಯಕ್ಕೆ ಲಾಕ್ ಡೌನ್ ಮಾಡುವ ಸ್ಥಿತಿಯಿಲ್ಲ ಎಂದು ಹೇಳಿದ್ದು, ಆದರೂ ಕೆಲವು ದಿನಗಳಿಂದ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಇನ್ನೊಂದೆಡೆ ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಯಾಗಿ ಆಗುತ್ತಿದೆ.

ಓದಿ : ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ : ಇದು ಮಾರ್ಚ್‍ನ ಮೆಗಾ ಆಫರ್

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲಸಿಕೆಯನ್ನು ಪಡೆದು ಕೊಂಡು, ಸರ್ಕಾರದೊಂದಿಗೆ ಕೋವಿಡ್ ವಿರುದ್ಧದ ಸಮರದಲ್ಲಿ ಕೈಜೋಡಿಸಿ ಎಂದು ರಾಜ್ಯದ ಜನರಿಗೆ ಟ್ವೀಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Advertisement

ನಾನೂ ಕೂಡ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ. ನಿಯಮಗಳನ್ವಯ ಎಲ್ಲ ಅರ್ಹರೂ ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡುತ್ತೇನೆ. ಇದು ಸಂಪೂರ್ಣ ಸುರಕ್ಷಿತ ಮತ್ತು ಕೊರೋನಾ ಮಣಿಸಲು ಅಗತ್ಯ. ಇದರ ಜೊತೆಗೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ನೈರ್ಮಲ್ಯ ಪಾಲಿಸುವುದನ್ನು ತಪ್ಪದೇ ಪಾಲಿಸಿ, ಸರ್ಕಾರದೊಂದಿಗೆ ಸಹಕರಿಸಿ ಎಂದು ಮುಖ್ಯಮಂತ್ರಿ ಪೋಸ್ಟ್ ಮಾಡಿದ್ದಾರೆ.

ಇನ್ನು, ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೋವಿಡ್ ಲಸಿಕೆ ಪಡೆದುಕೊಳ್ಳಿ, ಇದು ನಿಮ್ಮ, ನಿಮ್ಮ ಕುಟುಂಬದ ಮತ್ತು ಸಮಾಜದ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಕೊರೋನಾ ವಿರುದ್ಧದ ಈ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ಓದಿ : ಲಾಕ್ ಡೌನ್, ಕರ್ಫ್ಯೂ ಇರಲಿ… ಇನ್ನೂ ಕ್ವಾರಂಟೈನ್ ಯಾಕಿಲ್ಲ? ಮೂಲ ನಿಯಮವನ್ನೇ ಮರೆತ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next