ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ಬಳಿ ಮಾತನಾಡಲು ಏನೂ ಉಳಿದಿಲ್ಲ. ನಾನೇನು ಹಠಕ್ಕೆ ಕುಳಿತಿಲ್ಲ. ಅವರ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇನೆ. ಯಾರದೋ ಮಾತಿಗೆ ಬಲಿಯಾಗಬೇಡಿ, ಕರ್ತವ್ಯಕ್ಕೆ ಹಾಜರಾಗಿ ಎಂದು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರಲ್ಲಿ ಮನವಿ ಮಾಡುತ್ತೇನೆ. ಯಾರದೋ ಮಾತು ಕೇಳಬೇಡಿ, ಹಠಕ್ಕೆ ಬೀಳಬೇಡಿ. ಕಳೆದ ವರ್ಷ ಕೋವಿಡ್ ಸಮಸ್ಯೆಯಿದ್ದರೂ ಸಂಬಳ ನೀಡಿದ್ದೇವೆ ಎಂದರು.
ಇದನ್ನೂ ಓದಿ:ವಜಾ ಅಸ್ತ್ರ ಪ್ರಯೋಗ
ರಾಜ್ಯದ ಆದಾಯದಲ್ಲಿ ಯೋಜನೇತರ ವೆಚ್ಚಗಳಿಗೆ ಶೇಕಡಾ 85 ರಷ್ಟು ಖರ್ಚಾಗುತ್ತದೆ. ನಿಮ್ಮ ಒಂಬತ್ತು ಬೇಡಿಕೆಗಳಲ್ಲಿ ಎಂಟು ಬೇಡಿಕೆಗಳನ್ನು ಈಡೇರಿಸಿದ್ದವೆ. ಸಾರಿಗೆ ಸಂಸ್ಥೆ ಇರುವುದು ಸಾರ್ವಜನಿಕರ ಸೇವೆಗಾಗಿ, ಅವರಿಗೆ ತೊಂದರೆಯಾಗುತ್ತಿದೆ. ಸದ್ಯ ರಾಜ್ಯದ ಹಣಕಾಸಿಕ ಪರಿಸ್ಥತಿ ಅರ್ಥ ಮಾಡಿಕೊಂಡು ಬಸ್ ಓಡಾಟ ಪ್ರಾರಂಭ ಮಾಡಿ ಎಂದು ಸಿಎಂ ಬಿಎಸ್ ವೈ ಮನವಿ ಮಾಡಿದರು.
ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ. ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ನೀಡಲು ನೌಕರರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ:ಐಪಿಎಲ್ :ಇದುವರೆಗೆ ತಲಾ ನಾಲ್ಕು ಭಾರತೀಯರಿಗಷ್ಟೇ ಸೇರಿದೆ ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್!