ಬೆಂಗಳೂರು: ಬದಲಾವಣೆ ತರುವ ನಿಟ್ಟಿನಲ್ಲಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವರು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬ ಭರವಸೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ಕುರಿತು ಅಸಮಾಧಾನ ಹೊಂದಿರುವ ಎಲ್ಲರನ್ನು ಕರೆಸಿ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ:ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಬೊಮ್ಮಾಯಿ: ಹಲವರಿಗೆ ಅಚ್ಚರಿ,ಹೊಸಬರಿಗೆ ಬಂಪರ್ ಖಾತೆಗಳು
ಎಚ್.ಡಿ. ದೇವಗೌಡರ ಮಾತು ಕೇಳಿ ನನಗೆ ಖಾತೆ ನೀಡಿಲ್ಲ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಯಾರ ಮಾತು ಕೇಳಿ ಯಾರಿಗೂ ಖಾತೆ ಕೈ ತಪ್ಪಿಸಿಲ್ಲ ಎಂದರು.
ಇದನ್ನೂ ಓದಿ: ‘ಜನತಾ ಪರಿವಾರ ಸರ್ಕಾರ’ದ ಛಾಯೆ ಕಳೆಯಲು ಸಂಘ ಹಿನ್ನೆಲೆಯವರಿಗೆ ಬಂಪರ್: ಏನಿದು ಲೆಕ್ಕಾಚಾರ?