ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸೌಧದ ಮೊಗಸಾಲೆಯಲ್ಲಿ ಎದುರುಬದುರಾದ ಅಪರೂಪದ ಘಟನೆ ಮಂಗಳವಾರ ನಡೆಯಿತು.
ವಿಧಾನಸಭೆ ಕಲಾಪ ಮುಂದೂಡುತ್ತಲೇ ಯಡಿಯೂರಪ್ಪ – ಯತ್ನಾಳ್ ಮುಖಾಮುಖಿಯಾದರು. ಈ ವೇಳೆ ಯತ್ನಾಳ್ ಜೊತೆ ಸಿಎಂ ಯಡಿಯೂರಪ್ಪ ನಗುತ್ತಲೇ ಮಾತನಾಡಿದರು.
ಇದನ್ನೂ ಓದಿ:2-+3-4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ
ಈ ವೇಳೆ ಯತ್ನಾಳ್ ಬೆನ್ನು ತಟ್ಟಿದ ಯಡಿಯೂರಪ್ಪ, ಏನು ಮಾಡಬೇಕು ಹೇಳು ಮಾಡೋಣ ಎಂದರು. ಅದಕ್ಕೆ “ನಿಮ್ಮ ಕೈಯಲ್ಲಿದೆ ನೀವೇ ಮಾಡಿದರೆ ಆಗುತ್ತದೆ ಎಂದು ಯತ್ನಾಳ್ ಹೇಳಿದರು.
“ನಾನು ನೀನು ಕುಳಿತು ಮಾತನಾಡೋಣ. ಪಂಚಮಸಾಲಿ ಮೀಸಲಾತಿ ಕುರಿತು ಮಾತನಾಡೋಣ, ಏನು ಬೇಕೋ ಮಾತನಾಡೋಣ” ಎಂದು ಯತ್ನಾಳ್ ಗೆ ಯಡಿಯೂರಪ್ಪ ಭರವಸೆ ನೀಡಿದರು.
ಇದನ್ನೂ ಓದಿ: ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ?