ಬೆಂಗಳೂರು: ಸ್ವಿಜರ್ಲ್ಯಾಂಡ್ ನ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುವುದು ಖಚಿತವಾಗಿದೆ. ಮೇ 21 ರಂದು ಸಿಎಂ ಬೊಮ್ಮಾಯಿ ದಾವೋಸ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ಮೇ 22ರಿಂದ 26ರವರಗೆ ದಾವೋಸ್ ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ನಡೆಯಲಿದೆ. ಇದರಲ್ಲಿ ಭಾಗವಹಿಸಲು ದೇಶದ ಇಬ್ಬರು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೆ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ:ವಲಸೆ ತಡೆಗೆ ‘ಕೈ’ಕಮಾಂಡ್ ಸೂಚನೆ; ಆತಂಕ ತಂದ ಕಮಲ ಪಕ್ಷದ ತಂತ್ರ
ಹೀಗಾಗಿ ಸಿಎಂ ಬೊಮ್ಮಾಯಿ ಅವರು ಮೇ.21ರಂದು ರಾತ್ರಿ ಸಿಎಂ ದಾವೋಸ್ ಗೆ ತೆರಳಿ ಮೇ 26 ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ. ಸದ್ಯ ಸಿಎಂ ದಾವೋಸ್ ಪ್ರವಾಸದ ವೇಳಾಪಟ್ಟಿ ಸಿದ್ದವಾಗಿದ್ದು, ದೆಹಲಿಯಿಂದ ಪೊಲಿಟಿಕಲ್ ಕ್ಲಿಯರೆನ್ಸ್ ಗಾಗಿ ಕಾಯಲಾಗುತ್ತಿದೆ.