Advertisement

ಶಿವರಾಜ್ ಕುಮಾರ್ ಅವರ ಕೃತಜ್ಞತೆ ಅವರ ಮತ್ತು ದೊಡ್ಮನೆಯ ದೊಡ್ಡ ಗುಣ: ಸಿಎಂ ಬೊಮ್ಮಾಯಿ

11:49 AM Oct 31, 2021 | Team Udayavani |

ಬೆಂಗಳೂರು: ಎಂಥಹದ್ದೇ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಶಿವರಾಜ್ ಕುಮಾರ್ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಸರ್ಕಾರ ತನ್ನ ಕರ್ತವ್ಯ ನಿಭಾಯಿಸಿದೆ. ನಮ್ಮ‌ಅಧಿಕಾರಿಗಳೂ ಸಹಕಾರ ಕೊಟ್ಟಿದ್ದಾರೆ. ಇದು ಸರ್ಕಾರ, ಅಧಿಕಾರಿಗಳ ಕರ್ತವ್ಯವಾಗಿತ್ತು. ಶಿವರಾಜ್ ಕುಮಾರ್ ಅವರ ಕೃತಜ್ಞತೆ ಅವರ ಮತ್ತು ದೊಡ್ಮನೆಯ ದೊಡ್ಡ ಗುಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ನಿಧನ ನಂತರ ಕಳೆದ ಮೂರು ದಿನಗಳಿಂದ ಸಾರ್ವಜನಿಕರ ದರ್ಶನದಿಂದ ಎಲ್ಲ ವ್ಯವಸ್ಥೆ ಬಗ್ಗೆ ಪೊಲೀಸರು, ಅಧಿಕಾರಿಗಳು ಶ್ರಮವಹಿಸಿದ್ದಾರೆ. ಅಭಿಮಾನಿಗಳು ಶಿಸ್ತು, ಸಂಯಮ, ಶಾಂತಿಯಿಂದ ನಡೆದುಕೊಂಡಿದ್ದಾರೆ. ಯಾವುದೇ ರೀತಿಯಲ್ಲೂ ಹೆಚ್ಚು ಕಡಿಮೆಯಾಗದೆ, ಅಹಿತಕರ ಘಟನೆ ನಡೆದಿಲ್ಲ. ಪೊಲೀಸರ ಶ್ರಮ, ಶ್ರದ್ಧೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.

ಇದನ್ನೂ ಓದಿ:ಇಲ್ಲೇ ಎಲ್ಲೋ ಹೋಗಿದ್ದಾನೆ ಎನಿಸುತ್ತಿದೆ.. ನನ್ನ ಮಗನನ್ನೇ ಕಳೆದುಕೊಂಡೆ..: ಶಿವಣ್ಣನ ಕಣ್ಣೀರು

ಪುನೀತ್ ಕುಟುಂಬದವರೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಕುಟುಂಬದವರಿಗೂ ಧನ್ಯವಾದ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next