Advertisement

ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ತೀರಿ; ಜಾರ್ಜ್ ಗೆ ಸಿಎಂ ಬೊಮ್ಮಾಯಿ

02:54 PM Sep 19, 2022 | Team Udayavani |

ವಿಧಾನಸಭೆ: ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಹೆಗಲು ಮುಟ್ಟಿ ಕೊಳ್ಳುತ್ತೀರಿ ಎಂದು ಕಾಂಗ್ರೆಸ್ ಶಾಸಕ ಕೆ.ಜೆ ಜಾರ್ಜ್ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದರು.

Advertisement

ಬೆಂಗಳೂರು ಕೆರೆ ಒತ್ತುವರಿ ವಿಚಾರಕ್ಕೆ ಸಂಬಂಧಪಟ್ಟಂತೆ ಕಂದಾಯ ಸಚಿವ ಆರ್. ಅಶೋಕ ಉತ್ತರ ನೀಡುವ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಬೊಮ್ಮಾಯಿ, ಕಳೆದ ಕಳೆದ 2015 ರಲ್ಲಿ ಕಂದಾಯ ಇಲಾಖೆಯಿಂದ ಆದೇಶವೊಂದು ಹೊರ ಬಿತ್ತು. ನೀರು ಹರಿಯುವುದು ನಿಂತ ಕೆರೆಗಳ ಪುನಶ್ಚೇತನಕ್ಕೆ ಕ್ರಮ ಜರುಗಿಸಲಾಗಿತ್ತು. ಆದರೆ ಅದಕ್ಕೆ ಅವಕಾಶ ಸಿಕ್ಕಲೇ ಇಲ್ಲ. ನೀವ್ಯಾಕೆ ಮಧ್ಯೆ ಎದ್ದು ನಿಲ್ಲುತ್ತೀರಿ ಎಂದು ಜಾರ್ಜ್ ಗೆ ಸಿಎಂ‌ ಪ್ರಶ್ನೆ ಮಾಡಿದರು. ನಾನು ಮಂತ್ರಿಯಾಗಿದ್ದೆ ಹಾಗಾಗಿ ಮಾತನಾಡುತ್ತಿದ್ದೇನೆ ಎಂದ ಕೆ ಜೆ ಜಾರ್ಜ್ ಸಮಜಾಯಿಸಿ ಕೊಡಲು ಪ್ರಯತ್ನ ಮಾಡಿದರು.

ಇದನ್ನೂ ಓದಿ:ದಸರಾಗೆ ದೈವಿಭಕ್ತಿ ಹೊಂದಿರುವ ರಾಷ್ಟ್ರಪತಿಗಳು ಬರುತ್ತಿದ್ದಾರೆ: ಪ್ರಹ್ಲಾದ್ ಜೋಶಿ

ಆಗ ಕೆರೆ ಒತ್ತುವರಿಯಲ್ಲಿ ಜಾರ್ಜ್ ಇಲ್ಲ ಬಿಡಿ ಎಂದು ಕಂದಾಯ ಸಚಿವ ಅಶೋಕ್ ಸ್ಪಷ್ಟನೆ ನೀಡುವ ಜತೆಗೆ ಸಿದ್ಧರಾಮಯ್ಯ ಅಂತೂ ಮೊದಲೇ ಇಲ್ಲ ಬಿಡಿ ಎಂದಾಗ ಸದನ ನಗೆಗಡಲಲ್ಲಿ ಮೊಳಗಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next