ಬೆಂಗಳೂರು: ಉದಯಪುರದಲ್ಲಿ ಆಗಿರುವುದು ಅಮಾನವೀಯ ಮತ್ತು ಹೇಯ ಕೃತ್ಯ. ಭಯೋತ್ಮಾದಕತೆ ಕೃತ್ಯವಿದು. ಕೊಲೆ ಪ್ರಕಣದ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧಿಗಳ ಹಿಂದೆ ಯಾರೆಲ್ಲ ಇದ್ದಾರೆ, ಯಾವ ಸಂಘಟನೆ ಇದೆ ಅಂತ ಬಯಲಿಗೆ ಬರಬೇಕು ಎಂದರು.
ಚಂಡೀಗಢ ಜಿಎಸ್ಟಿ ಮಂಡಳಿ ಸಭೆ ವಿಚಾರವಾಗಿ ಮಾತನಾಡಿದ ಅವರು, ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ ಮಾಡಲಾಗಿದೆ. ಕಾನೂನಿನ ತೊಡಕುಗಳನ್ನು ನಿವಾರಣೆ ಮಾಡಲು ಬಹುತೇಕ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಅವಧಿ ವಿಸ್ತರಣೆ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಇದರ ಬಗ್ಗೆ ತಿಳಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದರು.
ಇದನ್ನೂ ಓದಿ:ಭಾರಿ ಮಳೆ: ಮಂಗಳೂರು ವಿ.ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಬಳಿ ಬಿರುಕು
Related Articles
ಕಮಿಷನ್ ಆರೋಪ ವಿಚಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಕೇಂದ್ರ ಗೃಹ ಇಲಾಖೆಯಿಂದ ದಾಖಲೆ ಕೇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ನಮಗೆ ಯಾವ ಸೂಚನೆಯೂ ಬಂದಿಲ್ಲ. ಅವರ ಸಂಘಕ್ಕೆ ಸೂಚನೆ ಬಂದಿದ್ದರೆ ದಾಖಲೆ ಕೊಡಲಿ. ಪ್ರಧಾನಿಗಳ ನಿರ್ದೇಶನ ಮೇರೆಗೆ ತನಿಖೆ ಮಾಡುತ್ತೇವೆ ಎಂದರು.
ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬಂದಿರುವ ವಿಚಾರವಾಗಿ ಮಾತನಾಡಿದ ಸಿಎಂ, ಅದು ಕಾಂಗ್ರೆಸ್ ನವರ ಆಂತರಿಕ ಸಮೀಕ್ಷೆ. ಅವರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದೇ ಹೇಳಬೇಕು. ಇನ್ನೇನು ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಹೇಳ್ತಾರಾ ಅವರು ಎಂದು ವ್ಯಂಗ್ಯವಾಡಿದರು