ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಬೆಂಗಳೂರು ನಗರ ಸುಗಮ ಸಂಚಾರದ ಕುರಿತು ಚರ್ಚಿಸಿದರು. ಕೇಂದ್ರ ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್, ರಾಜ್ಯದ ಸಾರಿಗೆ ಸಚಿವ ವಿ.ಶ್ರೀರಾಮುಲು, ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಇವತ್ತು ಪಿಡಬ್ಲುಡಿ, ಬಿಬಿಎಂಪಿ ಅಧಿಕಾರಿಗಳು, ಫೈನಾನ್ಸ್ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೀವಿ. ಯಾವ ರೀತಿ ಇಡೀ ರಾಜ್ಯದ ನ್ಯಾಷನಲ್ ಹೈವೇ ಪ್ರಾಜೆಕ್ಟ್ ಜಾರಿಗೆ ತರಬೇಕು, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗೊರಗುಂಟೆ ಪಾಳ್ಯ ಫ್ಲೈಓವರ್ ನ ಎಲೆವೇಟರ್ ರೋಡ್‌ನ ಹೇಗೆ ಆಪರೇಟ್ ಮಾಡಬೇಕು, ಭಾರೀ ವಾಹನಗಳು ಈಗಾಗಲೇ ಬಂದ್ ಆಗಿವೆ. ಕೇಬಲ್ ಮಾಡೋದಕ್ಕೆ ಯಾರಿಗೆ ವಹಿಸಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.
ಬೆಂಗಳೂರು ಸಂಬಂಧ ಎಸ್ ಟಿಆರ್ ಆರ್ ರಸ್ತೆಯಲ್ಲಿ ಕೆಲವು ವಿನಾಯತಿ ಕೊಡಬೇಕಿದೆ. ಆ ವಿನಾಯತಿಗಳನ್ನು ಕೊಡುವ ಬಗ್ಗೆ ನಾವು ಒಪ್ಪಿಕೊಂಡಿದ್ದೇವೆ. ಇದು ಕೂಡ ವೇಗದಲ್ಲಿ ನಡೆಯಲಿದೆ. ಒಂದು ಸಣ್ಣ ಪ್ಯಾಚ್ ಇತ್ತು, ಅದನ್ನು ಕೂಡ ಜೋಡಣೆ ಮಾಡಲು ಹೇಳಿದ್ದೇವೆ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದೇವೆ. ಬೆಂಗಳೂರು ಮೈಸೂರು ಹೈವೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಅದನ್ನು ಪೂರ್ಣ ಆಡಿಟ್ ಮಾಡಲು ಹೇಳಿದ್ದೇವೆ. ರೋಡ್ ಆಡಿಟ್ ಮತ್ತು ಡ್ರೈ ನೇಜ್ ಆಡಿಟ್ ಮಾಡಲಾಗುವುದು. ಡ್ರೈನೇಜ್ ಕ್ಯಾರಿಂಗ್ ಕೆಪಾಸಿಟಿ ಹೆಚ್ಚಿಸಬೇಕಿದೆ ಎಂದರು.
ಇದನ್ನೂ ಓದಿ:ಪ್ರತ್ಯೇಕ ಲಾಂಛನ: ಗ್ರಾ. ಪಂ. ಜನಪ್ರತಿನಿಧಿಗಳ ಬೇಡಿಕೆ
ಬೆಂಗಳೂರಿಗೆ ಬರುವ ಬಾಂಬೆ ಎಕ್ಸ್ ಪ್ರೆಸ್ ಇರಬಹುದು, ಚೆನ್ನೈ ಎಕ್ಸ್ ಪ್ರೆಸ್ ಇರಬಹುದು, ಇವುಗಳಿಗೆ ಸಿಟಿಇ ಇಂಟರ್ ಕನೆಕ್ಟಿವಿಟಿ ಹೇಗೆ ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡಲಾಗಿದೆ. ನ್ಯಾಷನಲ್ ಹೈವೇಯಲ್ಲಿ ಕೆಲವೆಡೆ ಸ್ಕೈವಾಕ್, ಬ್ರಿಡ್ಜ್, ಅಂಡರ್ ಪಾಸ್ ಮಾಡುವುದಿದೆ. ಅದರ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ. ಇವತ್ತು ಚರ್ಚೆ ಮಾಡಿರುವ ಎಲ್ಲಾ ವಿಚಾರಗಳು ತುರ್ತಾಗಿ ನಡೆಯುತ್ತವೆ. ಇದೇ ವರ್ಷ ಕೆಲಸಗಳು ಪ್ರಾರಂಭವಾಗಬೇಕೆನ್ನುವುದೇ ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸಗಳು ನಡೆಯಲಿವೆ. ರಾ.ಹೆದ್ದಾರಿ ಪ್ರಾಧಿಕಾರ ಕಡೆಯಿಂದ ಹಣ ಒದಗಿಸಿ ಕೊಡುವುದಾಗಿ ಹೇಳಿದ್ದಾರೆ. ಒಟ್ಟಾರೆ ಸಂಚಾರಕ್ಕಾಗಿಯೇ ಒಂದು ಅಥಾರಿಟಿ ಮಾಡಬೇಕಿದೆ. ಅದನ್ನ ಬರುವಂತಹ ಸದನದಲ್ಲಿ ಜಾರಿಗೆ ತರುತ್ತೇವೆ ಎಂದರು.