Advertisement

ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತ ಮತ್ತಷ್ಟು ಸಚಿವರು

10:51 PM Aug 10, 2022 | Team Udayavani |

ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಕುರಿತಂತೆ ಎದ್ದಿರುವ ಊಹಾಪೋಹ ಬುಧವಾರವೂ ಮುಂದುವರಿದಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಈ ಸಂಬಂಧ ಟ್ವೀಟ್‌ ವಾರ್‌ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಂಪುಟದ ಮತ್ತಷ್ಟು ಸಚಿವರು, ಮಾಜಿ ಸಚಿವರು ಸಿಎಂ ಅವರ ಬೆನ್ನಿಗೆ ನಿಂತು, ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ನಾಯಕರು ತಮ್ಮ ಒಳಜಗಳ ಮರೆಮಾಚಲು ಬಿಜೆಪಿಯಲ್ಲಿ ಸಿಎಂ ಬದಲಾವಣೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದ್ದಾರೆ.

Advertisement

ಕಾಂಗ್ರೆಸ್ಸಿಗರಿಗೆ ಬುದ್ಧಿ ಭ್ರಮಣೆ
ಚಿತ್ರದುರ್ಗ: ದೇಶದಲ್ಲಿ ಕಾಂಗ್ರೆಸ್‌ ವಿಪಕ್ಷ ವಾಗಲೂ ನಾಲಾಯಕ್‌. ಕಾಂಗ್ರೆಸ್ಸಿಗರಿಗೆ ಬುದ್ಧಿ ಭ್ರಮಣೆಯಾಗಿದ್ದು, ವರ್ಷ ಕಳೆದರೂ ಕಾಂಗ್ರೆಸ್‌ ಪಕ್ಷಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವ ಯೋಗ್ಯತೆ ಇಲ್ಲ. ನಮ್ಮ ಪಕ್ಷದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡು ತ್ತಾರೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಕಾಂಗ್ರೆಸ್ಸಿನವರಿಗೆ ಬದಲಾವಣೆ ಮಾಡುತ್ತೇವೆಂದು ಹೇಳಿದ್ದಾರೆಯೇ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಪ್ರಶ್ನಿಸಿದರು.

ಮೊಳಕಾಲ್ಮೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ಸಿನಲ್ಲಿ ಒಳಜಗಳ ಹೆಚ್ಚಾಗಿದೆ. ಆ ಪಕ್ಷದಲ್ಲಿ ಗೊಂದಲ ಮನೆ ಮಾಡಿದ್ದು, ಇದನ್ನು ಮರೆ ಮಾಚಲು ಬಿಜೆಪಿ ಯಲ್ಲಿ ಸಿಎಂ ಬದಲಾ ವಣೆ ವದಂತಿ ಟ್ವೀಟ್‌ ಮಾಡು ತ್ತಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವ ದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದರು.

ಕುಡುಕರ ಮಾತಿಗೆ ಬೆಲೆ ಕೊಡಲ್ಲ
ಶಿವಮೊಗ್ಗ : ನೆಹರೂ ಈ ದೇಶವನ್ನು ಮೂರು ಭಾಗ ಮಾಡಿದವರು. ಅವರ ಹೆಸರು ಹೇಳಿಕೊಂಡು ಬೇಕಾದರೆ ಕಾಂಗ್ರೆಸ್‌ನವರು ಕಾರ್ಯಕ್ರಮ ಮಾಡಲಿ. ಯಾರಧ್ದೋ ಕೆಟ್ಟ ಹೆಸರು ಹೇಳಿ ಕೊಂಡು ನಾವು ಹೋಗುವುದಿಲ್ಲ. ತಿಹಾರ್‌ ಜೈಲಿನಲ್ಲಿದ್ದ ಡಿಕೆಶಿ, ಅಗ್ರಹಾರ ಜೈಲಿಲ್ಲಿದ್ದ ನಲಪಾಡ್‌ ಇವರ ನಾಯಕ. ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕುಡುಕರ ಮಾತಿಗೆ ಬೆಲೆ ಕೊಡಲ್ಲ. ಇವರ ಅವ ಧಿಯಲ್ಲಿ ಮೂವರು ಸಿಎಂ ಆಗಿಲ್ವಾ? ವೀರೇಂದ್ರ ಪಾಟೀಲರಂತಹ ಸಿಎಂ ಅನ್ನೇ ಇವರು ಏರ್‌ಪೋರ್ಟ್‌ ನಲ್ಲಿ ಬದಲಾಯಿಸಿದ್ದರು. ಸಿಎಂ ಬದಲಾಗಲಿ ಎನ್ನುವುದು ಅವರ ಭಾವನೆ ಇರಬಹುದು. ಇಂದಿರಾ ಗಾಂಧಿಗೆ  ಒಮ್ಮೆ ಧಿಕ್ಕಾರ ಕೂಗಿದ್ದ ಸಿದ್ದರಾಮಯ್ಯ ಈಗ ಸಿಎಂ ಆಗಲು ಜೈಕಾರ ಹಾಕುತ್ತಿದ್ದಾರೆ ಎಂದರು.

Advertisement

ಸಿಎಂ ಬದಲಾವಣೆ ಕಪೋಲಕಲ್ಪಿತ
ಬೆಂಗಳೂರು: ಸುದ್ದಿಯಲ್ಲಿರಲು ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎಲ್ಲರ ಸಮ್ಮತದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ವರಿಷ್ಠರೇ ಹೇಳಿದ್ದಾರೆ. ಕಾಂಗ್ರೆಸ್‌ನವರಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ, ವಿನಾಕಾರಣ ಕಾಂಗ್ರೆಸ್ಸಿಗರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.
– ಬಿ.ಸಿ. ಪಾಟೀಲ್‌, ಕೃಷಿ ಸಚಿವ

ಮುಖ್ಯಮಂತ್ರಿ ಬದಲಾವಣೆ ಎಂಬುದು ಕಾಂಗ್ರೆಸ್‌ನವರ ಊಹೆ. ಅವರು ತಿರುಕನ ಕನಸು ಕಾಣುತ್ತಿದ್ದು, ಆ ಕನಸು ಎಂದಿಗೂ ನನಸಾಗದು. ಕಾಂಗ್ರೆಸ್‌ನವರಿಗೆ ದೇಶದ ಬಗ್ಗೆ ಜ್ಞಾನ ಹಾಗೂ ಅಭಿಮಾನವೇ ಇಲ್ಲ.
– ಶ್ರೀರಾಮುಲು, ಸಾರಿಗೆ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next