Advertisement
ನಂತರ ಮಾತನಾಡಿದ ಅವರು, ಆಳುವುದು ಮತ್ತು ಆಡಳಿತ ಮಾಡುವುದು ವ್ಯತ್ಯಾಸ ಇದೆ. ಜನಪ್ರತಿನಿಧಿಗಳು ಆಳುವ ಕೆಲಸ ಮಾಡಬೇಕು. ಆಡಳಿತ ಯಂತ್ರ ಆಡಳಿತ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಆಳುವವರು ಆಡಳಿತ ಮಾಡಲು, ಆಡಳಿತ ಮಾಡುವವರು ಆಳಲು ಹೊರಟಿದ್ದಾರೆ. ಈ ಬಗೆ ಸ್ಪಷ್ಟತೆ ಇರಬೇಕು ಎಂದರು.
Related Articles
Advertisement
ಒಂದು ರಾಜ್ಯದ ಸರ್ಕಾರ ಶ್ರೀಮಂತ ಆದರೆ ತನಗೆ ಬೇಕಾದ ಕಾರ್ಯಕ್ರಮಗಳನ್ನು ಮಾತ್ರ ಮಾಡಲು ಸಾಧ್ಯ. ಜನರೇ ಶ್ರೀಮಂತರಾದರೆ ಅವರ ಜೀವನ ಮಟ್ಟ, ತಲಾ ಆದಾಯ ಹೆಚ್ಚಳವಾಗುತ್ತದೆ. ಅವರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಬಂದು ಸರ್ಕಾರವೂ ಶ್ರೀಮಂತ ಆಗುತ್ತದೆ. ಪ್ರತಿಯೊಬ್ಬರ ತಲಾ ಆದಾಯ ಹೆಚ್ಚಳವಾಗಬೇಕು. ದೇಶದ ಒಟ್ಟು ತಲಾ ಆದಾಯದಲ್ಲಿ 4 ನೇ ಸ್ಥಾನದಲ್ಲಿದ್ದೇವೆ. ರಾಜ್ಯದ ಶೇ 35% ರಷ್ಟು ಜನರ ತಲಾ ಆದಾಯ ಮಾತ್ರ ಹೆಚ್ಚಿದೆ ಶೇ 65% ಜನರ ತಲಾ ಆದಾಯದಲ್ಲಿ ಪಾಲ್ಗೊಳ್ಳುತ್ತಿಲ್ಲ. ಎಲ್ಲರ ತಲಾ ಆದಾಯ ಹೆಚ್ಚಾಗಬೇಕು. ಈ ಯೋಜನೆ ಕ್ರಾಂತಿಕಾರಕವಾಗಿದ್ದು, ಇದು ಯಶಸ್ವಿಯಾಗಬೇಕು. ಅತಿ ಹೆಚ್ಚು ಜನ ಸಂಖ್ಯೆ ಇರುವ ವಿಧಾನಸಭಾ ಕ್ಷೇತ್ರಗಳಿವೆ. ಈ ಯೋಜನೆ ಯಶಸ್ವಿ ಆಗಲೇಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎಲ್ಲ ಯೋಜನೆಗಳು ಯಶಸ್ವಿಯಾಗಲು ನಾಗರಿಕರ ಸಹಕಾರ ಮುಖ್ಯ. ಪಡಿತರ, ಪಿಂಚಣಿ, ಖಾತಾ ಹಂಚಿಕೆ ಸೇರಿದಂತೆ 56 ಸೇವೆ ಅಳವಡಿಸಲಾಗಿದೆ. 1902 ಸಂಖ್ಯೆಗೆ ಕರೆ ಮಾಡಿದರೆ ಪರಿಹಾರ ದೊರೆಯಲಿದೆ. ಸಾರಿಗೆ ಇಲಾಖೆಯಲ್ಲಿ ಲೈಸೆನ್ಸ್ ಪಡೆಯಲು ಸಾರಿಗೆ ಇಲಾಖೆಗೆ ಬರುವ ಅಗತ್ಯವಿಲ್ಲ. ಈ ಯೋಜನೆಯಲ್ಲಿ 30 ಯೋಜನೆ ಜಾರಿಗೆ ತರಲಾಗಿದೆ. ವಾಹನ ನೋಂದಣಿ ಕೂಡ ಡೀಲರ್ ಸಂಸ್ಥೆಯಿಂದಲೇ ನೀಡಲು ತೀರ್ಮಾನಿಸಿದೆ. ರಾಜ್ಯದಲ್ಲಿ 10 ಸಂಸ್ಥೆಗಳಿಗೆ ನೀಡಲಾಗಿದೆ. ಅದು ಯಶಸ್ವಿಯಾದರೆ ಎಲ್ಲ ಕಡೆ ವಿಸ್ತರಣೆ ಮಾಡಲಾಗುತ್ತದೆ. 4.11 ಲಕ್ಷ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. 2.46 ಲಕ್ಷ ಬಿಪಿಎಲ್ ಹಾಗೂ ಎಪಿಎಲ್ ಅರ್ಜಿಗಳು ಬಂದಿದ್ದವು. ಎಲ್ಲರಿಗೂ ಅನುಮತಿ ನೀಡಲಾಗಿದೆ ಎಂದರು.
ಕಾನೂನು ಏನೇ ಮಾಡಿದ್ದರೂ ಮನುಷ್ಯ ಪ್ರಾಮಾಣಿಕವಾಗಿದ್ದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಎಲ್ಲ ಸೇವೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ನೋಡಿಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.