Advertisement

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

12:05 PM Oct 24, 2021 | Team Udayavani |

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪ ಸರ್ಕಾರದ ಸಾಧನೆಗಳೇ ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರಿ ಆಗಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿ ಮೂಲಕವೇ ನಿಮ್ಮ ಮುಂದೆ ಬಂದು ನಿಲ್ಲಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು

Advertisement

ಭಾನುವಾರ ಸಿಂದಗಿ ಕ್ಷೇತ್ರದ ಕನ್ನೋಳಿ ಗ್ರಾಮದಲ್ಲಿ ರೋಡ್ ಶೋ  ನಂತರದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮನಗೂಳಿ ಕಾಕಾ ಅನುಕಂಪದ ಅಲೆಯಲ್ಲಿ ಗೆದ್ದಿದ್ದರು. ಈಗ ಅನುಕಂಪವೂ ಇಲ್ಲ, ಹಿರಿಯರೂ ಇಲ್ಲ. ಹೀಗಾಗಿ ಬಿಜೆಪಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದರು.

ನಾನು ಅಧಿಕಾರ ಸ್ವೀಕರಿಸುತ್ತಲೇ ರೈತರ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ 20 ಲಕ್ಷ  ಫಲಾನುಭವಿ 1 ಸಾವಿರ‌ ಕೋಟಿ ರೂ. ಯೋಜನೆ ಘೋಷಿಸಿದ್ದೇನೆ ಎಂದರು.

ಕೋರವಾರ ಏತ ನೀರಾವರಿಗೆ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಇಂಡಿ ಶಾಖಾ ಕಾಲುವೆ ಕೊನೆ ಭಾಗದ ರೈತರಿಗೆ ನೀರು ಕೊಡುವುದು ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

5000 ಸಿಂದಗಿ ಕ್ಷೇತ್ರಕ್ಕೆ ಮನೆ ಮಂಜೂರು ಮಾಡಲಾಗಿದೆ. ಭವಿಷ್ಯದಲ್ಲಿ ಸಿಂದಗಿ ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.

Advertisement

ಕಾಂಗ್ರೆಸ್ ನವರು ಏನೂ ಕೆಲಸ ಮಾಡದ ಕಾರಣ ಹೇಳಲು ಏನೂ ವಿಷಯ ಇಲ್ಲದ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆದರೆ ಈ ಕಾಂಗ್ರೆಸ್ ಪಕ್ಷದವರು ಅಧಿಕಾರ ಸಿಕ್ಕಾಗ ಸ್ವಾರ್ಥ ರಾಜಕಾರ ಮಾಡಿದ್ದೇ ಹೆಚ್ಚು ಎಂದು ದೂರಿದರು.

ಇದನ್ನೂ ಓದಿ: ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗನಂಜನಗೂಡು, ಕುಂದಗೋಳ ಉಪ ಚುನಾವಣೆಯಲ್ಲಿ ಗೋಣಿ ಚೀಲದಲ್ಲಿ ಹಣ ತಂದು ಹಂಚಿ ಗೆದ್ದಿದ್ದರು. ತಮ್ಮ ಅನುಭವವನ್ನೇ ಇದೀಗ ಕಾಂಗ್ರೆಸ್ ನಾಯಕರು ಗೋಣಿ ಚೀಲದಲ್ಲಿ ಹಣ ತಂದು ಹಂಚುತ್ತಿದ್ದಾರೆ ಎಂದು ಹಪಾಹಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ಹಿಂದಿನ ಚುನಾವಣೆ ಸಂದರ್ಭ ದಲ್ಲಿ ಕಾಂಗ್ರೆಸ್ ನಾಯಕರು ಸೋತ ಬಳಿಕ ಬಿಜೆಪಿ ಹಣಬಲ, ತೋಳಬಲ, ಅಧಿಕಾರ ಬಲದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ಆರೋಪಿಸುತ್ತಿದ್ದರು.

ಆದರೆ ಸಿಂದಗಿ, ಹಾನಗಲ್ ಚುನಾವಣೆ ಪೂರ್ವದಲ್ಲೇ ಹಣಬಲ, ತೋಳ್ಬಲದ ಕುರಿತು ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕರು ಸೋಲುವ ಭೀತಿಯ ಹತಾಶ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಸಿ.ಸಿ.ಪಾಟೀಲ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇತರರು ರೋಡ ಶೋನಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next