ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲು ಕಲ್ಪಿಸುವುದರ ಪರವಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಪಂಚಮಸಾಲಿ ಸಮಾಜದಿಂದ ಮುಖ್ಯಮಂತ್ರಿ ನಿವಾಸದ ಎದುರು ಹಮ್ಮಿಕೊಳ್ಳಲು ಉದ್ದೇಶಿಸಿರುವ ಹೋರಾಟ ಸರಿಯಲ್ಲ. ಇದರಿಂದ ಉದ್ದೇಶ ಈಡೇರಿಕೆಯಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.
ಇದಲ್ಲದೇ ಸಮಾಜದ ಪ್ರಮುಖ ಹಿರಿಯ ನಾಯಕರಾದ ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಸೇರಿ ನಾನೂ ಕೂಡ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ತ್ವರಿತವಾಗಿ ವರದಿ ಕೊಡಲು ಮನವಿ ಮಾಡಿದ್ದೇವೆ. ಹೀಗಾಗಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದರಿಂದ ಸಮಾಜದ ಪ್ರಮುಖರು ಹಿಂದೆ ಸರಿಯುವುದು ಉತ್ತಮ ಎಂದರು.
ಇದನ್ನೂ ಓದಿ : ಕಾರ್ಯಕ್ರಮಕ್ಕೆ ಆಹ್ವಾನಿಸಿ ವೇದಿಕೆಯಲ್ಲಿ ಕುರ್ಚಿ ಹಾಕಲಿಲ್ಲ ಎಂದು ಸಭೆಯಿಂದ ಹೊರ ನಡೆದ ಸಚಿವ!
Related Articles
ಕೆಲವರಿಗೆ ಬ್ಯಾರಿಕೇಡ್ ಹಾರುವುದು ಅಭ್ಯಾಸವಾಗಿದೆ. ಹೀಗಾಗಿಯೇ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಅಗ್ನಿಪಥ ಯೋಜನೆ ವಿರುದ್ಧ ಹಿಂಸಾ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹರಿಹಾಯ್ದರು.