Advertisement

ನೂತನ ಸಂಪುಟ ಸೇರುವ ನಿರೀಕ್ಷೆಯಲ್ಲಿ ಹಲವು ಆಕಾಂಕ್ಷಿಗಳು

11:07 PM Jul 28, 2021 | Team Udayavani |

ಬೆಂಗಳೂರು: ಬಸವರಾಜ್‌ ಬೊಮ್ಮಾಯಿ  ಸಂಪುಟ ಸೇರಲು ಅನೇಕ   ಶಾಸಕರು ಕಸರತ್ತು ನಡೆಸುತ್ತಿದ್ದು, ಜಿಲ್ಲೆ ಹಾಗೂ ಪ್ರಾದೇಶಿಕ ಲೆಕ್ಕಾಚಾರದಲ್ಲಿ ತಮಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಹೊಂದಿದ್ದಾರೆ.

Advertisement

ಅರವಿಂದ ಬೆಲ್ಲದ (ಹುಬ್ಬಳ್ಳಿ- ಧಾರವಾಡ ಪಶ್ಚಿಮ), ಬಸನಗೌಡ ಪಾಟೀಲ್‌ ಯತ್ನಾಳ್‌, (ವಿಜಯಪುರ)  ಪೂರ್ಣಿಮಾ  ಶ್ರೀನಿವಾಸ್‌ (ಹಿರಿಯೂರು), ರೂಪಾಲಿ ನಾಯ್ಕ (ಕಾರವಾರ), ರಾಮದಾಸ್‌ (ಮೈಸೂರಿನ ಕೃಷ್ಣರಾಜ), ಸತೀಶ್‌ ರೆಡ್ಡಿ (ಬೊಮ್ಮನಹಳ್ಳಿ), ಎಸ್‌.ಆರ್‌. ವಿಶ್ವನಾಥ್‌ (ಯಲಹಂಕ), ಎ.ಎಸ್‌. ಪಾಟೀಲ್‌ ನಡಹಳ್ಳಿ ( ಮುದ್ದೇಬಿಹಾಳ), ರಾಜುಗೌಡ (ಸುರಪುರ), ಶಿವನಗೌಡ ನಾಯಕ್‌( ದೇವದುರ್ಗ), ಕುಮಾರ ಬಂಗಾರಪ್ಪ (ಸೊರಬ), ಎಸ್‌. ಎ. ರವೀಂದ್ರನಾಥ್‌(ದಾವಣಗೆರೆ),  ಸುನಿಲ್‌ ಕುಮಾರ್‌ (ಕಾರ್ಕಳ), ಎಂ.ಪಿ.ರೇಣುಕಾಚಾರ್ಯ (ಹೊನ್ನಾಳಿ), ಪರಣ್ಣ ಮುನವಳ್ಳಿ (ಗಂಗಾವತಿ) ಪಿ.ರಾಜೀವ್‌ (ಕುಡಚಿ),  ದುರ್ಯೋಧನ ಐಹೊಳೆ ( ರಾಯಭಾಗ), ಶಂಕರ ಪಾಟೀಲ್‌ ಮುನೇನಕೊಪ್ಪ ( ನವಲಗುಂದ), ಆನಂದ ಮಾಮನಿ (ಸವದತ್ತಿ), ದತ್ತಾತ್ರೇಯ ಪಾಟೀಲ್‌ ರೇವೂರ ( ಕಲಬುರ್ಗಿ ದಕ್ಷಿಣ), ಅಪ್ಪಚ್ಚು ರಂಜನ್‌ (ಮಡಿಕೇರಿ) ಅವರು ಸಚಿವ ಸ್ಥಾನ  ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಕೇಂದ್ರ ಮಾದರಿ ?:

ಕೇಂದ್ರದ ಮಾದರಿಯಲ್ಲಿ  ನೂತನ ಸಂಪುಟ  ರಚನೆ ಸಾಧ್ಯತೆಯಿದೆ. ಹಾಗಾದರೆ ಸಮುದಾಯಗಳ  ಶಾಸಕರಿಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.

ನಾನು ನಾಡಿದ್ದು ದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸುತ್ತೇನೆ. ಜಗದೀಶ್‌ ಶೆಟ್ಟರ್‌ ನನ್ನ ಸಂಪುಟದಲ್ಲಿ ಸೇರುವುದಿಲ್ಲ ಎಂದು ಹೇಳಿರುವ ಬಗ್ಗೆ ಮಾಹಿತಿ ಇಲ್ಲ. ಅದು ಚರ್ಚೆಯ ವಿಷಯವೇ ಅಲ್ಲ.-ಬಸವರಾಜ್‌ ಬೊಮ್ಮಾಯಿ,  ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next