Advertisement

ಜನಪರ ನಿರ್ಣಯಗಳ ಫ‌ಲ ಜನರಿಗೆ ಸಿಗಲಿ: ಸಿಎಂ

11:35 PM Jul 28, 2022 | Team Udayavani |

ಬೆಂಗಳೂರು: ಅಧಿಕಾರಿಗಳು ಕಡತ ವಿಲೇವಾರಿ ಮಾಡುವು ದಷ್ಟೇ ತಮ್ಮ ಜವಾಬ್ದಾರಿ ಎಂದು ಭಾವಿಸದೆ,  ಸರಕಾರ ಕೈಗೊಂಡ ಜನಪರ ನಿರ್ಣಯಗಳು ಜನರನ್ನು ತಲುಪಿದೆಯೇ ಎಂಬುದನ್ನು ಖಾತರಿಪಡಿಸಿ ಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.

Advertisement

ತಮ್ಮ ಅಧಿಕಾರಾವಧಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಾವು ಈವರೆಗೆ ನಡೆದು ಬಂದ ಹಾದಿಯನ್ನು ಅವಲೋಕಿಸಿಕೊಳ್ಳಬೇಕು ಹಾಗೂ ಮುಂದಿನ ಹೆಜ್ಜೆಯನ್ನು ಗುರುತಿಸಬೇಕು. ರಾಜ್ಯದಲ್ಲಿ ಉತ್ತಮ ಆಡಳಿತದ ಪರಂಪರೆಯೇ ಇದೆ. ರಾಜ್ಯದಲ್ಲಿ ಹುಟ್ಟಿದವರು ಹಾಗೂ ನೆಲೆಸಿರುವ ಎಲ್ಲರೂ ಸುದೈವಿಗಳು. ಆದ್ದರಿಂದ ನಾವು ಸಮಾಜಕ್ಕೆ ಏನನ್ನು ಹಿಂದಿರುಗಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ. ರಾಜಕಾರಣಿಗಳ ಅಧಿಕಾರಾವಧಿ ಐದು ವರ್ಷ. ಆದರೆ ಅಧಿಕಾರಿಗಳು ಶಾಶ್ವತವಾಗಿ ಇರುವವರು. ನಿಮ್ಮ ಸಾಮರ್ಥ್ಯ, ಅನುಭವಗಳನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯದ ಹಣಕಾಸು ಪರಿಸ್ಥಿತಿಯಲ್ಲೂ ಹೆಚ್ಚಿನ ಸುಧಾರಣೆಯಾಗಿದ್ದು, ಕೋವಿಡ್‌ನಿಂದ ಚೇತರಿಸಿ ಕೊಂಡ ಬಳಿಕ ಇಲಾಖೆಗಳೂ ಕ್ರಿಯಾಶೀಲವಾಗಿವೆ. ಜಲಜೀವನ್‌ ಮಿಷನ್‌ನಲ್ಲಿ 17ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿದ್ದೇವೆ. ಮನೆಗಳ ನಿರ್ಮಾಣ, ಲಸಿಕಾ ಅಭಿಯಾನ ಮೊದಲಾದವುಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದರು.ಸಚಿವ ಸಂಪುಟದ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next