Advertisement

ಕುರ್ಚಿಗಾಗಿ ತುರ್ತು ಪರಿಸ್ಥಿತಿ: ಸಿಎಂ ಬಸವರಾಜ ಬೊಮ್ಮಾಯಿ ಟೀಕೆ

12:11 AM Jun 26, 2022 | Team Udayavani |

ಬೆಂಗಳೂರು: ನೆಹರೂ ಕುಟುಂಬವು ದೇಶದ ಎಲ್ಲ ಗುಣ-ಧರ್ಮ ಗಳನ್ನು ಮರೀಚಿಕೆಯಾಗಿ ಮಾಡಿ, ದೇಶದ ಜನರಲ್ಲಿ ತಾನು-ತನ್ನದು-ತನ್ನ ಕುಟುಂಬದ ಭ್ರಮೆ ಹುಟ್ಟಿಸಿ ಅಧಿಕಾರವನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಂಡದ್ದು ದುರ್ದೈವ ಮತ್ತು ದುಃಖಕರ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

Advertisement

ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವ ಭವನದಲ್ಲಿ ಶನಿವಾರ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ “ತುರ್ತು ಪರಿಸ್ಥಿತಿ- ಕಾಂಗ್ರೆಸ್‌ ಸರ್ವಾಧಿಕಾರ ಹೇರಿದ ಕರಾಳ ದಿನಕ್ಕೆ 47 ವರ್ಷ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಪ್ರಧಾನಮಂತ್ರಿ ಕುರ್ಚಿ ಉಳಿಸಿಕೊಳ್ಳಲು ರಾತೋರಾತ್ರಿ ದೇಶ ದಲ್ಲಿ ತುರ್ತು ಪರಿಸ್ಥಿತಿ ಹೇರಿದರು.

ಆರೆಸ್ಸೆಸ್‌ ನಾಯಕರನ್ನಷ್ಟೇ ಅಲ್ಲದೆ, ತುರ್ತು ಪರಿಸ್ಥಿತಿಯ ವಿರುದ್ಧ ಮಾತನಾ ಡಿದ ಅವರದೇ ಪಕ್ಷದವರನ್ನೂ ಜೈಲಿನಲ್ಲಿಟ್ಟಿದ್ದರು ಎಂದರು.

ಹುಬ್ಬಳ್ಳಿಯಲ್ಲಿ ಬೀದಿಗಿಳಿದು ಹೋರಾಟ
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು- ದಿವಂಗತ ಅನಂತಕುಮಾರ್‌ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದೆವು. ತುರ್ತು ಪರಿಸ್ಥಿತಿ ಬಗ್ಗೆ ಬರುತ್ತಿದ್ದ ಕರಪತ್ರಗಳನ್ನು ಓದುತ್ತಿದ್ದೆವು. 3 ದಿನ ಚರ್ಚಿಸಿದ ಬಳಿಕ ಬೀದಿಗಿಳಿದು ಹೋರಾಟ ಮಾಡಿದೆವು. ತುರ್ತು ಪರಿಸ್ಥಿತಿಯಲ್ಲಿ ಬೀದಿಗಿಳಿದು ಹೋರಾಟ ಮಾಡುವುದೇ ದೊಡ್ಡ ಸುದ್ದಿ. ಅನಂತರ ಪೊಲೀಸರು ನೇರವಾಗಿ ಕಾಲೇಜಿಗೆ ಬಂದು ನಾಲ್ವರನ್ನು ಹಿಡಿದು ಬಂಧಿಸಿದರು. ಅವರನ್ನು ಬಿಡಿಸಲು ಹೋಗಿ ಅನಂತಕುಮಾರ್‌ ಜೈಲಿಗೆ ಹೋದರು. ಇದರಿಂದ ಅವರ ಶಿಕ್ಷಣ ಕೂಡ ವ್ಯತ್ಯಾಸವಾಯಿತು ಎಂದು ಹೋರಾಟದ ದಿನಗಳನ್ನು ಅವರು ಮೆಲುಕು ಹಾಕಿದರು.

ತುರ್ತು ಪರಿಸ್ಥಿತಿ ದೇಶದ ದುರ್ದೈವ: ಸದಾನಂದ ಗೌಡ
ಬೆಂಗಳೂರು: ತುರ್ತು ಪರಿಸ್ಥಿತಿ ದೇಶದ ದುರ್ದೈವ. ಇಂದಿರಾ ಗಾಂಧಿ ಪ್ರಧಾನಿಯಾದ ಬಳಿಕ ಸಂವಿಧಾನದ ಯಾವುದೇ ಪರಿಚ್ಛೇದಗಳಿಗೆ ಗೌರವ ಕೊಡಲಿಲ್ಲ.

Advertisement

1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಸುಮಾರು 25 ತಿಂಗಳ ಕಾಲ ಜಾರಿಯಲ್ಲಿತ್ತು.ತುರ್ತು ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳೂ ವಿರೋಧಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಸಂಸದ ಡಿ.ವಿ. ಸದಾನಂದ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದೇಶದಲ್ಲಿ ಅಘೋಷಿತ ತುರ್ತು
ಪರಿಸ್ಥಿತಿ: ಡಾ| ಲಲಿತಾ ನಾಯಕ್‌
ಬೆಂಗಳೂರು: ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿ ದೇಶದ ನಿರ್ಮಾಣ ವಾಗಿದ್ದು, ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಬೇರುಗಳನ್ನು ಅಲು ಗಾಡಿಸಿ ಸಂವಿಧಾನವನ್ನು ಬುಡಮೇಲು ಮಾಡಲು ಕೆಲವು ಶಕ್ತಿಗಳು ಮುಂದಾಗಿವೆ ಎಂದು ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ ಡಾ| ಬಿ. ಟಿ. ಲಲಿತಾ ನಾಯಕ್‌ ಆರೋಪಿಸಿದರು.

ಶನಿವಾರ ಶಾಸಕರ ಭವನದಲ್ಲಿ ಹಿಂದಿನ ತುರ್ತು ಪರಿಸ್ಥಿತಿ ಘೋಷಿತ ಮತ್ತು ಇಂದಿನ ತುರ್ತು ಪರಿಸ್ಥಿತಿ ಅಘೋಷಿತ ಕುರಿತು ಹಮ್ಮಿಕೊಂಡ ವಿಚಾರ ವಿನಿಮಯ ಸಭೆಯಲ್ಲಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next