Advertisement

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬಗ್ಗೆ ಸದನದಲ್ಲಿ ಉತ್ತರ ನೀಡಿದ್ದೇನೆ : ಸಿಎಂ  

07:55 PM Sep 25, 2021 | Team Udayavani |

ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ನಾನು ಈಗಾಗಲೇ ಸದನದಲ್ಲಿ ಉತ್ತರ ನೀಡಿದ್ದೇನೆ. ಯತ್ನಾಳಗೆ ತಿಳಿಸಿದ್ದೇವೆ. ಅವರು ಹೋಗಿ ಸ್ವಾಮೀಜಿ ಜೊತೆ ಚರ್ಚೆ ಮಾಡಿ ಬಂದಿದ್ದಾರೆ.‌ ಸತತವಾಗಿ ಸಂಪರ್ಕದಲ್ಲಿ ಇದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಂತರ ಜನರು ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ. ಅವರಿಗೆ ತೊಂದರೆ ಆಗಬಾರದು. ಎಲ್ಲರು ಸಹಕಾರ ನೀಡಬೇಕು. ಜನರ ಬದುಕು ಈಗಷ್ಟೆ ಸಹಜ ಸ್ಥಿತಿಗೆ ಬರುತ್ತಿದೆ. ಕಾರಣ ಇಂತಹ ಸಂದರ್ಭದಲ್ಲಿ ಭಾರತ ಬಂದ್ ಮಾಡುವುದು ಸರಿಯಲ್ಲ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಈಗಾಗಲೇ ಮೂರು ವರ್ಷ ವಿವಿಧ ಹಂತದಲ್ಲಿ ಶಿಕ್ಷಣ ತಜ್ಞರು, ಶ್ರೇಷ್ಠ ತಜ್ಞರ ಸಮಿತಿ ಚರ್ಚೆ ಮಾಡಿದೆ. 21ನೇ ಶತಮಾನಕ್ಕೆ ಯಾವ ಶಿಕ್ಷಣ ಬೇಕು ಅದನ್ನು ಜಾರಿ ಮಾಡಲಾಗಿದೆ. ನಮ್ಮ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಬೇಕಾಗಿದೆ. ಅದಕ್ಕಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಪ್ರಧಾನಿ ಮೋದಿ‌ ಭಾರತ ಭವಿಷ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದ್ದಾರೆ. ಭಾರತೀಯರಿಂದ, ಭಾರತೀಯರಿಗೋಸ್ಕರ. ಭಾರತೀಯ ಮಕ್ಕಳಿಗೋಸ್ಕರ ಆಗುತ್ತಿರುವ ಬದಲಾವಣೆ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next