ಹಾವೇರಿ: ಜಿಲ್ಲೆಯ ನಿರ್ಮಾಣಕ್ಕೆ ದಿ|ಸಿ.ಎಂ.ಉದಾಸಿ ಅವರು ಕಾರಣೀಭೂತರಾಗಿದ್ದರು. 4 ದಶಕಗಳ ಕಾಲ ರಾಜಕೀಯ ಜೀವನ ನಡೆಸಿದ ಅವರು ರಾಜ್ಯ ರಾಜಕೀಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅಖೀಲ ಭಾರತ ವೀರಶೈವ ಮಹಾಸಭಾದಿಂದ ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಏರ್ಪಡಿಸಿದ್ದ ಇತ್ತೀಚೆಗೆ ಅಗಲಿದ ವೀರಶೈವ ಲಿಂಗಾಯತ ಸಮುದಾಯದ ಸಿ.ಎಂ.ಉದಾಸಿ, ಡಾ|ಚಿತ್ತರಂಜನ್ ಕಲಕೋಟಿ ಸೇರಿದಂತೆ ವಿವಿಧ ಗಣ್ಯರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ದಿ.ಉದಾಸಿ ಅವರು ರೈತರ ಪರವಾಗಿ ಹೆಚ್ಚಿನ ಕಾಳಜಿ ಹೊಂದಿದ್ದರು. ಅವರ ಹೋರಾಟದ ಫಲವಾಗಿ ಹೊಸ ಜಿಲ್ಲೆ ಜೆ.ಎಚ್.ಪಟೇಲ್ ಅವರ ಅವಧಿಯಲ್ಲಿ ಉದಯವಾಯಿತು. ನಾಲ್ಕು ದಶಕಗಳ ರಾಜಕಾರಣದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ಧರಾಗಿ ಸೇವೆ ಸಲ್ಲಿಸಿದ್ದಾರೆ. ರೈತರಿಗೆ ಬೆಳೆ ವಿಮೆ ಪಡೆಯುವಲ್ಲಿ ಇದ್ದ ಸಮಸ್ಯೆಗಳನ್ನು ಅಭ್ಯಸಿಸಿ ಸಮಸ್ಯೆಗಳನ್ನು ನಿವಾರಿಸಿ ಅತಿ ಹೆಚ್ಚು ವಿಮೆ ಪಡೆಯುವಂತೆ ಮಾಡಿದ್ದು ಉದಾಸಿಯವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದರು.
ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ರಾಜಶೇಖರ ಸಿಂಧೂರ ನನ್ನ ಕುಟುಂಬದ ಆತ್ಮೀಯರಾಗಿದ್ದರು. ಜನರ ಆಶಯಕ್ಕೆ ಮಣಿದು ಅವರು ರಾಜಕಾರಣಕ್ಕೆ ಬಂದಿದ್ದರು. 2008ರಲ್ಲಿ ಯಡಿಯೂರಪ್ಪ ಅವರು ಕರೆದು ಕೇಳಿದಾಗ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದ ಜನರ ಸೇವೆಗೆ ಬರ್ತಾರೆ ಅಂದ್ರೆ ನಾನು ನನ್ನ ಸ್ಥಾನ ಬಿಟ್ಟು ಕೊಡುತ್ತೇನೆಂದು ನನಗೆ ಚುನಾವಣೆಗೆ ಸ್ಪ ರ್ಧಿಸಲು ಅವಕಾಶ ಕಲ್ಪಿಸಿದ್ದರೆಂದು ಸ್ಮರಿಸಿದರು. ಹಾವೇರಿಯ ಶಾಸಕರಾಗಿದ್ದ ಡಾ| ಚಿತ್ತರಂಜನ್ ಕಲಕೋಟಿ ಅವರು ರಾಜಕೀಯವಾಗಿ ಅಷ್ಟೇ ಅಲ್ಲ, ತಮ್ಮ ವೃತ್ತಿ ಮೂಲಕವೂ ಜನರಿಗೆ ಸೇವೆ ಸಲ್ಲಿಸಿದ್ದಾರೆ ಎಂದರು.
ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಸಚಿವ ಮುನಿರತ್ನ, ಶಾಸಕರಾದ ಅರವಿಂದ ಬೆಲ್ಲದ, ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ವಿಪ ಸದಸ್ಯ ಎಸ್.ವಿ.ಸಂಕನೂರ, ಜಿಪಂ ಮಾಜಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ ಇತರರಿದ್ದರು. ಅಖೀಲ ಭಾರತ ವೀರಶೈವ ಮಹಾಸಭಾ ಜಿÇÉಾಧ್ಯಕÒ ಎಂ.ಎಸ್. ಕೋರಿಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ಶಿಕÒಕ ನಾಗರಾಜ ನಡುವಿನಮಠ ನಿರೂಪಿಸಿದರು.