Advertisement

ಬನವಾಸಿಗೆ ಆಗಮಿಸಿದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಕಾಂಗ್ರೆಸ್ ಪ್ರಮುಖರು

06:31 PM Feb 28, 2023 | Team Udayavani |

ಶಿರಸಿ: ಕನ್ನಡ ಪ್ರಥಮ ರಾಜಧಾನಿ ಬನವಾಸಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಎದುರು ಸ್ಥಳೀಯ ಕಾಂಗ್ರೆಸ್ ಪ್ರಮುಖರು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದ ಘಟನೆ ಮಂಗಳವಾರ ನಡೆದಿದೆ.

Advertisement

ಜನರ ಉತ್ಸವವನ್ನಾಗಿ ಕದಂಬೋತ್ಸವವನ್ನು ಆಚರಿಸಬೇಕಿತ್ತು. ಇದು ಬಿಜೆಪಿ ಉತ್ಸವದಂತೆ ನಡೆಸಲಾಗುತ್ತಿದೆ. ಬಿಜೆಪಿ ಚಿಹ್ನೆಯ ಟಿಶರ್ಟ್ ಹಂಚಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಾವು ಕಾಂಗ್ರೆಸ್ ಶಾಲು ಹಾಕಿ ಬಂದಿದ್ದು ಕೆಲ‌ ಕಾಲ ಗೊಂದಲ‌ ಉಂಟಾಗಿತ್ತು.
ಸಿಎಂ ತೆರಳುವ ಮಾರ್ಗದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ, ಶ್ರೀನಿವಾಸ ಧಾತ್ರಿ ಇತರರು ಇದ್ದು ಘೋಷಣೆ ಕೂಗಿದರು‌.

ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದೆ. ಅದನ್ನು ತಮ್ಮ ಕಾರ್ಯಕ್ರಮದಂತೆ ಸಚಿವ ಶಿವರಾಮ ಹೆಬ್ಬಾರ ಬಿಂಬಿಸುತ್ತಾರೆ ಎಂದೂ‌ ಪ್ರತಿಪಾದಿಸಿದರು.

ಎಎಸ್ ಪಿ ಜಯಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾಂಗ್ರೆಸ್ ನಾಯಕ ವಿ.ಎಸ್.ಪಾಟೀಲ ಹಾಗೂ ಶ್ರೀನಿವಾಸ ಭಟ್ ಧಾತ್ರಿ ಅವರನ್ನು ಬಂಧಿಸಲಾಯಿತು.

ಇದನ್ನೂ ಓದಿ: ಜಿ-20 ಶೃಂಗಸಭೆಗಾಗಿ ತಂದಿದ್ದ ಹೂವಿನ ಕುಂಡಗಳನ್ನು ಐಷಾರಾಮಿ ಕಾರಿನಲ್ಲಿ ಬಂದು ಕದ್ದೊಯ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next