Advertisement

ಮೋದಿ ಆಶೀರ್ವಾದವಿದ್ದರೆ ನವ ಕರ್ನಾಟಕದ ಕನಸು ನನಸು: ಸಿಎಂ ಬೊಮ್ಮಾಯಿ

03:40 PM Jun 20, 2022 | Team Udayavani |

ಬೆಂಗಳೂರು: ಮೋದಿ ಆಶೀರ್ವಾದವಿದ್ದರೆ ನವ ಕರ್ನಾಟಕದ ಕನಸು ನನಸಾಗುವುದರಲ್ಲಿ ಅನುಮಾನವೇ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಾಖ್ಯಾನಿಸಿದ್ದಾರೆ.

Advertisement

ಕೊಮ್ಮಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ‌ಮಾತನಾಡಿದ ಅವರು ಕುವೆಂಪು ವಿರಚಿತ ನಾಡಗೀತೆ ಉಲ್ಲೇಖಿಸಿ ಮಾತನಾಡಿ ” ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೇ ” ಎಂಬ ವಾಕ್ಯದಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಪ್ರಧಾನಿಯವರ ನವಭಾರತದ ಕಲ್ಪನೆಗೆ ನವ ಕರ್ನಾಟಕ ನಿರ್ಮಾಣದ ಮೂಲಕ ನಾವು ಕೈ ಜೋಡಿಸುತ್ತಿದ್ದೇವೆ. ಮೋದಿಯವರ ಆಶೀರ್ವಾದ ಇದ್ದರೆ ನವ ಕರ್ನಾಟಕದ ಕನಸು ಈಡೇರುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಆಕ್ಸಿಜನ್ ಕೊಡಲಾಗದವರು ಯೋಗ ಮಾಡಲು ಬಂದಿದ್ದಾರೆ: ಪ್ರಧಾನಿ ಭೇಟಿಗೆ ಸಿದ್ದು ವ್ಯಂಗ್ಯ

ಒಬ್ಬ ಮುತ್ಸದ್ಧಿಯಾದವ ಸದಾ ಅಭಿವೃದ್ಧಿ ಕಾರ್ಯಕ್ರಮಗಳ ಕಡೆಗೆ ಗಮನ ನೀಡುತ್ತಾರೆ. ಮೋದಿಯವರು ಪ್ರಧಾನಿಯಾದ ಬಳಿಕ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಅವರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಲಭಿಸಿದ ಅನುದಾನ ಅಪಾರ ಎಂದು ಹೇಳಿದರು.

ಪ್ರಧಾನಿಯವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ‌ ಶಕೆ ಆರಂಭವಾಗಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next