Advertisement

ಕಾಂಗ್ರೆಸ್ ಹೋರಾಟಕ್ಕೆ ಸಿಎಂ ತಿರುಗೇಟು: ಗಂಗಾ ಕಲ್ಯಾಣ ಅಕ್ರಮದ ತನಿಖೆ ನಡೆಸುತ್ತೇನೆ; ಸಿಎಂ

02:20 PM Sep 14, 2022 | Team Udayavani |

ಬೆಂಗಳೂರು :  ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ” ತನಿಖಾ ತಿರುಗೇಟು” ನೀಡಿದ್ದಾರೆ.

Advertisement

ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ‌ ರೂ.ಅವ್ಯವಹಾರ ನಡೆದಿದೆ ಎಂದು ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ವಿಷಯ ಪ್ರಸ್ತಾಪಿಸಿದರು. ಆದರೆ ಸರಕಾರ ಸಮರ್ಪಕ ಉತ್ತರ ನೀಡಿಲ್ಲ ಎಂದು ಶಾಸಕರಾದ ಪ್ರಿಯಾಂಕ ಖರ್ಗೆ ,ಯತೀಂದ್ರ ಸಿದ್ದರಾಮಯ್ಯ, ಪ್ರಸಾದ್ ಅಬ್ಬಯ್ಯ, ಭೀಮಾ ನಾಯಕ್ ಹಾಗೂ ಉಳಿದ ಶಾಸಕರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾಪದ ಬಳಿಕ ಸಭೆ ನಡೆಸೋಣ ಎಂದರೂ ಪ್ರತಿಭಟನೆ ಹಿಂಪಡೆಯಲಿಲ್ಲ.

ಇದನ್ನೂ ಓದಿ:  ಹಿಂದಿ ದಿವಸ್ ಸದ್ದು ಗದ್ದಲ: ಹುಚ್ಚಾಸ್ಪತ್ರೆಯಲ್ಲಿ ಮಾತನಾಡಿದಂತೆ ಮಾತಾಡ್ತೀರಾ?: ಸ್ಪೀಕರ್

ಈ ವಿಚಾರವನ್ನು ಕಾಂಗ್ರೆಸ್ ಸದನದ ಹೊರಗೆ ಅಸ್ತ್ರವಾಗಿ ಬಳಸಬಹುದೆಂಬುದನ್ನು ಮನಗಂಡ ಸಿಎಂ ಬೊಮ್ಮಾಯಿ, ತಕ್ಷಣ ಈ ವಿಚಾರವನ್ನು ತನಿಖೆಗೆ ಒಪ್ಪಿಸುತ್ತೇನೆ. 2018 ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಪ್ರಕರಣವನ್ನು ‌ತನಿಖೆಗೆ ಒಪ್ಪಿಸುತ್ತೇವೆ ಎಂದಾಗ ಕಾಂಗ್ರೆಸ್ ಪ್ರತಿಭಟನೆ ವಾಪಾಸ್ ಪಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next