ಬೆಂಗಳೂರು: ಮಣ್ಣು ಉಳಿಸಲು ಹಲವಾರು ಕಾರ್ಯಕ್ರಮಗಳಿಗೆ ಯಡಿಯೂರಪ್ಪ ಮಾರ್ಗದರ್ಶನದಲ್ಲಿ 100 ಕೋಟಿ ಗ್ರೀನ್ ಎಕಾಲಾಜಿಕಲ್ ಬಜೆಟ್ ಎತ್ತಿಡಲಾಗಿದೆ. ರಾಜ್ಯದಲ್ಲಿರುವ ಎರಡೂವರೆ ಲಕ್ಷ ಬಂಜರು ಭೂಮಿಯನ್ನು ಪುನಶ್ಚೇತನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೇ. 24 ರಷ್ಟದ್ದ ಅರಣ್ಯ ಪ್ರದೇಶವನ್ನು ಶೇ.30ಕ್ಕೆ ಹೆಚ್ಚಿಸುವ ಕೆಲಸ ಮಾಡುತ್ತೇವೆ. ತಿಂಗಳಲ್ಲಿ ನಾಲ್ಕು ದಿನ (ಅಂದ್ರೆ ನಾಲ್ಕು ಭಾನುವಾರ) ಮಣ್ಣು ಉಳಿಸುವ ನಿಟ್ಟಿನಲ್ಲಿ ರೈತರ ಹತ್ತಿರ ಹೋಗುವ ಸಂಕಲ್ಪ ಮಾಡಬೇಕು. ನಾಲ್ಕು ದಿನಗಳ ನಮ್ಮ ನಡೆ ಮಣ್ಣಿನ ಕಡೆ ಅಗಬೇಕು ಎಂದರು.
ನಮ್ಮ ನೆಚ್ಚಿನ ಹಿರಿಯ ನಾಯಕರು, ಮಾರ್ಗದರ್ಶಕರು ಹಾಗೂ ಮಣ್ಣಿನ ಉಳಿಸುವಂತಹ ವಿಶೇಷ ಕಾರ್ಯಕ್ರಮ ಮಾಡಿದ ಯಡಿಯೂರಪ್ಪನವ್ರಿಗೆ ಧನ್ಯವಾದಗಳು. ಇದೊಂದು ಅಪರೂಪವಾದ ಅನುಕರಣೆಯ ಸಮಾರಂಭ. ಹಲವಾರು ಸಮಾರಂಭಗಳು ಅಭಿವೃದ್ಧಿ, ರಾಜಕೀಯದ ಬಗ್ಗೆ ನಾವು ನೋಡಿದ್ದೇವೆ. ಆದರೆ ನಮ್ಮ ಭವಿಷ್ಯಕ್ಕೆ ಕಾರಣವಾಗಿರುವ ಹಾಗೂ ಪಂಚಭೂತಗಳಿಗೆ ಕಾರಣವಾಗಿರುವ ಮಣ್ಣಿನ ಕಾರ್ಯಕ್ರಮ ಎಂದು ಬಣ್ಣಿಸಿದರು.
ಇದನ್ನೂ ಓದಿ:ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರಲ್ಲಿ ಹಲವರಿಗೆ ವಂಚನೆ : ಪ್ರಕರಣ ದಾಖಲು
Related Articles
ನಮ್ಮ ಜೀವನದ ಉದ್ದೇಶ ಏನು ಎಂಬ ಪ್ರಶ್ನೆಗಳು ಸದಾಕಾಲ ಮನುಷ್ಯನಿಗೆ ಇರಬೇಕು. ನಿಸರ್ಗ, ಪಂಚಭೂತದಲ್ಲಿ, ಮಣ್ಣು, ನೀರಿನಲ್ಲಿ ದೇವರಿದ್ದಾನೆ. ಈ ಭೂಮಿಯಲ್ಲಿ ಎಲ್ಲಾ ಪಂಚಭೂತಗಳು ಅಳವಡಿಸಿಕೊಡ್ಡಿದ್ದೇವೆ. ಎಲ್ಲಾ ಪಂಚಭೂತಗಳನ್ನ ಅಳವಡಿಸಿಕೊಂಡಿದ್ದು ಈ ಭೂಮಿ ತಾಯಿ. ಒಂದು ಕಾಳನ್ನು ಹಾಕಿದರೆ ಸಾವಿರಾರು ಕಾಳುಗಳನ್ನ ಕೊಡುವಂತದ್ದು ಈ ಮಣ್ಣಿನ ಮಹತ್ವ. ಮಣ್ಣಿನ ಸಾರವನ್ನು ಪರೀಕ್ಷೆ ಮಾಡಿ ಮಣ್ಣಿನ ಸತ್ವವನ್ನು ಹೆಚ್ಚಿಸುವಂತಹ ಕಾರ್ಯಕ್ರಮವೇ ಭೂ ಚೇತನ ಕಾರ್ಯಕ್ರಮ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, 21ನೇ ಶತಮಾನದಲ್ಲಿ ನಾವು ಅತ್ಯಂತ ಕಳವಳದಿಂದ ಜೀವನ ನಡೆಸುತ್ತಿದ್ದೇವೆ. ನಮ್ಮನ್ನು ಕಾಪಾಡುವ ಪ್ರಕೃತಿಯೇ ನಮ್ಮ ವಿರುದ್ದವಾಗಿದ್ದೆಯೇ ಎನಿಸುತ್ತಿದೆ. ನಾಗರೀಕತೆ ಎಷ್ಟೇ ಮುಂದುವರೆದರೂ, ಮನುಷ್ಯನಿಗೆ ಅಗತ್ಯವಾಗಿ ಬೇಕಾದದ್ದು, ಉಸಿರಾಡಲು ಅಗತ್ಯ ಗಾಳಿ, ಶುದ್ದ ನೀರು ಬೇಕು. ಆದರೆ ಉಸಿರಾಡಲು ಶುದ್ದ ಗಾಳಿ, ಶುದ್ದ ನೀರೇ ಇಲ್ಲದಂತಾಗಿದೆ. ಆಹಾರ ಉತ್ಪಾದನೆನೆ ಲಭ್ಯವಿರುವ ಮಣ್ಣಿನ್ನ ನಾವು ಲಭ್ಯ ಮಾಡಿಕೊಳ್ಳದೆ ಸಾಕಷ್ಟು ಮಾರ್ಪಾಡು ಮಾಡಿಕೊಳ್ಳುತ್ತಿದ್ದೇವೆ. ಸದ್ಗುರು ಕೈಕೊಂಡಿರುವ ಮಣ್ಣನ್ನ ಉಳಿಸಿ ಅಭಿಮಾನ ಅರ್ಥಪೂರ್ಣವಾಗಿದೆ. ಈ ಅಭಿಮಾನಕ್ಕೆ ಭಾಗಿಯಾಗಿ ನೈಸರ್ಗಿಕ ಸಂಪನ್ಮೂಲವನ್ನ ಉಳಿಸಬೇಕಾಗಿದೆ ಎಂದರು.