Advertisement

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಕಸದ ಬುಟ್ಟಿಗೆ :ಫಲಾನುಭವಿಗಳ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ

02:45 AM Mar 17, 2023 | Team Udayavani |

ಮಂಗಳೂರು: ಕಾಂಗ್ರೆಸ್‌ನವರ ಗ್ಯಾರಂಟಿ ಕಾರ್ಡ್‌ ಎಂಬುದು ಡೆಬಿಟ್‌ ಅಥವಾ ಕ್ರೆಡಿಟ್‌ ಕಾಡ್‌ ಅಲ್ಲ. ಕೇವಲ ವಿಸಿಟಿಂಗ್‌ ಕಾರ್ಡ್‌. ಜನರು ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ಧಾಳಿ ನಡೆಸಿದ್ದಾರೆ.

Advertisement

ಕರಾವಳಿ ಉತ್ಸವ ಮೈದಾನದಲ್ಲಿ ಗುರುವಾರ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆ ಬಂದಾಗ ಆಗಲಾರದ್ದು ಹೇಳಿ, ಆಸೆ ಆಮಿಷ ಒಡ್ಡುತ್ತಾರೆ. ಪ್ರತೀ ಮನೆಯೊಡತಿಗೆ 2 ಸಾವಿರ ರೂ. ಕೊಡು ತ್ತೇವೆ ಎನ್ನುತ್ತಾರೆ. ಹೀಗೆ ವರ್ಷಕ್ಕೆ 24 ಸಾವಿರ ರೂ.ಗಳಂತೆ ಕೋಟ್ಯಂತರ ಜನರಿಗೆ ನೀಡಿದರೆ ಉಳಿದ ಯೋಜನೆ ಗಳು ಸ್ಥಗಿತಗೊಳ್ಳಲಿವೆ. ಛತ್ತೀಸ್‌ ಗಢದಲ್ಲಿ ಕಾಂಗ್ರೆಸ್‌ ಸರಕಾರ ಹಣ ಕೊಡುವುದಾಗಿ ಹೇಳಿ 4 ವರ್ಷಗಳಿಂದ ಕೊಟ್ಟಿಲ್ಲ. 200 ಯುನಿಟ್‌ ಉಚಿತ ವಿದ್ಯುತ್‌ ಕೊಡುವು ದಾಗಿ ಹೇಳುತ್ತಿದ್ದಾರೆ. ಆದರೆ ಬಡವರ ಬಳಕೆಯೇ 75-80 ಯುನಿಟ್‌. ಜನರನ್ನು ವಂಚಿಸುವ ರೀತಿ ಇದು. 10 ಕೆ.ಜಿ. ಅಕ್ಕಿ ಕೊಡುತ್ತೇವೆ ಅನ್ನುವವರು ತಮ್ಮದೇ ಸರಕಾರ ಇದ್ದಾಗ 5 ಕೆ.ಜಿ.ಗೆ ಇಳಿಸಿದರು. ಎಲ್ಲರನ್ನೂ ಎಲ್ಲ ಕಾಲದಲ್ಲೂ ವಂಚಿಸಲು ಆಗದು ಎಂದರು.

ಶೇ. 85ರ ಸರಕಾರ
ಹಿಂದೆ ಕಾಂಗ್ರೆಸ್‌ ಸರಕಾರ ಕೇಂದ್ರ ದಲ್ಲಿ ಇದ್ದಾಗ ಫಲಾನುಭವಿಗಳಿಗೆ 1 ರೂ.ನಲ್ಲಿ 15 ಪೈಸೆ ಮಾತ್ರವೇ ಸಿಗು ತ್ತಿತ್ತು ಎಂದು ಅವರ ಪ್ರಧಾನಿಯೇ ಹೇಳಿದ್ದರು. ಹಾಗಾದರೆ ಅವರದ್ದು ಶೇ. 85ರ ಸರಕಾರ ಎಂದಾಯಿತು. ಈಗ ಸಹಾಯಧನಗಳು ಪಾರದರ್ಶಕವಾಗಿ ನೇರವಾಗಿ ಫಲಾನುಭವಿಗಳ ಖಾತೆಗೇ ಹೋಗುತ್ತಿವೆ. ಎಲ್ಲೂ ಕಮಿಷನ್‌ ಇಲ್ಲ. ಇದು ಡಬಲ್‌ ಎಂಜಿನ್‌ ಸರಕಾರದ ಸಾಧನೆ ಎಂದು ಹೇಳಿದರು.

ಸಚಿವ ಸುನಿಲ್‌ ಕುಮಾರ್‌ ಮಾತ ನಾಡಿ, ಜಿಲ್ಲೆಯ 23 ಲಕ್ಷ ಮಂದಿಯ ಪೈಕಿ 21 ಲಕ್ಷ ಮಂದಿ ಕೇಂದ್ರ-ರಾಜ್ಯ ಯೋಜನೆಗಳ ಫ‌ಲಾನುಭವಿಗಳು. ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಫಲಾನುಭವಿ ಗಳನ್ನು ಹೊಂದಿರುವುದು ದಾಖಲೆ ಎಂದರು.

Advertisement

ಸಚಿವ ಎಸ್‌. ಅಂಗಾರ ಮಾತನಾಡಿ, ಮೀನುಗಾರಿಕೆ ಇಲಾಖೆ ಹಿಂದೆ ಕೇವಲ ನಾಮಫ‌ಲಕದಲ್ಲಿ ಮಾತ್ರವಿತ್ತು. ಈಗ ಇಲಾಖೆಯಲ್ಲಿ ಮಹತ್ವದ ಬದಲಾ ವಣೆಗಳಾಗಿವೆ. ಆಲಮಟ್ಟಿಯಲ್ಲಿ25 ಎಕ್ರೆ ಜಾಗದಲ್ಲಿ ಮೀನುಮರಿ ಉತ್ಪಾದನೆ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದ ವ್ಯಾಸ ಕಾಮತ್‌ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಯವರ ಸಹಕಾರದಿಂದ ಕ್ಷೇತ್ರ ಸಮಗ್ರ ಅಭಿವೃದ್ಧಿ ಆಗುತ್ತಿದೆ ಎಂದರು.
ಸಚಿವರಾದ ಎಸ್‌.ಟಿ. ಸೋಮ ಶೇಖರ್‌, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ| ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಉಮಾನಾಥ ಕೋಟ್ಯಾನ್‌, ಸಂಜೀವ ಮಠಂದೂರು, ರಾಜೇಶ್‌ ನಾೖಕ್‌ ಉಳೆಪ್ಪಾಡಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಉದಯಕುಮಾರ್‌ ಶೆಟ್ಟಿ, ಎ.ವಿ. ತೀರ್ಥರಾಮ್‌, ರವಿಶಂಕರ ಮಿಜಾರ್‌, ಮೇಯರ್‌ ಜಯಾನಂದ ಅಂಚನ್‌, ಉಪಮೇಯರ್‌ ಪೂರ್ಣಿಮಾ, ಡಿಸಿ ರವಿಕುಮಾರ್‌ ಎಂ.ಆರ್‌ ಇದ್ದರು. ಜಿ.ಪಂ. ಸಿಇಒ ಡಾ| ಕುಮಾರ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ನಿರೂಪಿಸಿದರು.

ವಿವಿಧ ಇಲಾಖೆಗಳ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಯ ಚೆಕ್‌ ವಿತರಿಸಲಾಯಿತು.

ಜೇನ್ನೊಣ ಕಚ್ಚಿಸಿಕೊಂಡರೂ ಬೇಸರವಿಲ್ಲ
ನಾನು ಪರಿಶಿಷ್ಟರ ಮೀಸಲು ಹೆಚ್ಚಳ ಮಾಡಿದಾಗ ಬೇರೆ ಪಕ್ಷದವರು ಜೇನು ಗೂಡಿಗೆ ಕೈಹಾಕಬೇಡಿ ಎಂದಿದ್ದರು. ಕೈ ಹಾಕಿ ಚುಚ್ಚಿಸಿಕೊಂಡರೂ ಬೇಸರವಿಲ್ಲ, ಶೋಷಿತ ವರ್ಗದವರಿಗೆ ಜೇನು ಸಿಗಬೇಕು ಎಂಬುದು ನನ್ನ ನಿರ್ಧಾರವಾಗಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ತುಳುನಾಡಿನ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ
ಕರಾವಳಿ, ತುಳುನಾಡು ಇನ್ನಷ್ಟು ಅಭಿವೃದ್ಧಿಯಾಗಲಿ. ಆಗ ರಾಜ್ಯದ ಜಿಡಿಪಿ ಹೆಚ್ಚಲಿದ್ದು, ತುಳುನಾಡಿನ ಅಭಿವೃದ್ಧಿಯಲ್ಲಿ ರಾಜ್ಯದ ಪ್ರಗತಿ ಇದೆ ಎಂದರು.
ಪ್ರವಾಸೋದ್ಯಮಕ್ಕೆ ಪೂರಕವಾಗಿ 65 ಕೋ.ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಿ ಸಲಾಗುತ್ತಿದೆ. ಮಂಗಳೂರು-ಕಾರವಾರ-ಗೋವಾ-ಮುಂಬಯಿ ಜಲ ಮಾರ್ಗ ಜಾರಿಗೆ ಬರಲಿದ್ದು, ಜನರಿಗೆ ಅನುಕೂಲವಾಗಲಿದೆ. ಎಲ್ಲ 8 ಸಾವಿರ ನಾಡದೋಣಿಗಳಿಗೆ ಸೀಮೆಎಣ್ಣೆ ವಿತರಣೆ, ಸೀಮೆಎಣ್ಣೆಯಿಂದ ಡೀಸೆಲ್‌ ಅಥ ವಾ ಪೆಟ್ರೋಲ್‌ ಎಂಜಿನ್‌ಗೆ ಬದಲಾಗಲು ವೆಚ್ಚದ ಶೇ. 50ನ್ನು ಭರಿಸುವುದು, ವಾರ್ಷಿಕ ಡೀಸೆಲ್‌ ಕೋಟಾವನ್ನು 2.5 ಲಕ್ಷ ಲೀ.ಗೆ ಏರಿಸಲಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next