Advertisement

ಭೋವಿ ಸಮುದಾಯಕ್ಕಾಗಿ ಕಲ್ಲು,ಮಣ್ಣು ಗಣಿಗಾರಿಕೆ ಕಾನೂನಿಗೆ ತಿದ್ದುಪಡಿ: ಸಿಎಂ ಬೊಮ್ಮಾಯಿ

02:42 PM Aug 01, 2022 | Team Udayavani |

ದಾವಣಗೆರೆ: ಮಾನವಶಕ್ತಿ ಉಪಯೋಗಿಸಿ ಕಲ್ಲು ಒಡೆದು ಬದುಕುವ ಕುಲಕಸಬು ಸಮುದಾದವರಿಗೆ ಅನುಕೂಲವಾಗುವಂತೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಲ್ಲು, ಮಣ್ಣು ಗಣಿಗಾರಿಕೆ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ನಗರದ ಶಿವಯೋಗ ಮಂದಿರದಲ್ಲಿ ಸೋಮವಾರ ನಡೆದ ಶ್ರೀಸಿದ್ದರಾಮೇಶ್ವರ ರಥ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಲಕಸಬು ಮಾಡುವ ಭೋವಿ ಸಮಾಜದವರಿಗೆ ಕಲ್ಲು, ಮಣ್ಣು ಗಣಿಗಾರಿಕೆಯಲ್ಲಿ  ಹೆಚ್ಚಿನ ಅವಕಾಶ ಹಾಗೂ ರಿಯಾಯಿತಿ ದೊರಕಿಸುವ ನಿಟ್ಟಿನಲ್ಲಿ  ಕಾನೂನು ತಿದ್ದಪಡಿ ಮಾಡಲಾಗುವುದು ಎಂದರು.

ಇದನ್ನೂ ಓದಿ: ಸಾವಿರ ಸಲ ಹೇಳುತ್ತೇನೆ ಅಂಜನಾದ್ರಿಯೇ ಹನುಮನ ಜನ ಸ್ಥಳ : ಸಿಎಂ ಬೊಮ್ಮಾಯಿ ಘೋಷಣೆ

ತಲತಲಾಂತರಗಳಿಂದ ಮಾಡಿಕೊಂಡು ಬಂದ ಕಸಬು ಅಲ್ಲೋಲಕಲ್ಲೋಲ ಆಗುವಂಥ ಕಾನೂನುಗಳು ಬಂದಿವೆ. ಜತೆಗೆ ಕಾನೂನು ಹೆಸರಲ್ಲಿ ಅಧಿಕಾರಿಗಳಿಂದ ಸಮಾಜದವರಿಗೆ ಕಿರುಕುಳ ಕೊಡುವುದು ಸಹ ನಡೆದಿದೆ. ಕಾನೂನು ಮಾಡುವಾಗ ಅದಕ್ಕೆ ಸಂಬಂಧಿಸಿ ಕುಲಕಸಬು ಮಾಡುವ ಸಮುದಾಯಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ ಎಂದರು.

Advertisement

ಭೋವಿ ಸಮಾಜದವರು ತಮ್ಮ ಕುಲಕಸಬು ಮಾಡಲು ಕಾನೂನಾತ್ಮಕ ತೊಂದರೆ ಎದುರಿಸುತ್ತಿರುವುದು ಗಮನಕ್ಕಿದೆ. ಸಮಸ್ಯೆ ತಾತ್ಕಾಲಿಕ ಹಾಗೂ ಸ್ಥಳೀಯ ಎನಿಸಿದರೂ ಪರಿಸರ, ಕಾನೂನು ಹೆಸರಲ್ಲಿ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕಾಗಿದೆ. ಆ ದಿಸೆಯಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.

ನಿಗಮಕ್ಕೆ ಅಧ್ಯಕ್ಷರ ನೇಮಕ:

ಭೋವಿ ಅಭಿವೃದ್ಧಿ ನಿಗಮದ ಕೆಲಅಽಕಾರಿಗಳು ಸಮುದಾಯದವರಿಗೆ ಸರಿಯಾಗಿ ಸೌಲಭ್ಯ ದೊರಕಿಸಿ ಕೊಡದೆ ತೊಂದರೆ ಮಾಡಿದ್ದಾರೆ. ಅವರನ್ನು ಈಗಾಗಲೇ ಬದಲಾಯಿಸಿದ್ದೇನೆ. ಇನ್ನೆರಡು ದಿನಗಳಲ್ಲಿ  ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನೂ ನೇಮಕ ಮಾಡುತ್ತೇನೆ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ  ಭರವಸೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next