ಕಾರವಾರ(ಬನವಾಸಿ): ಕನ್ನಡ ರಾಜ್ಯವನ್ನು ಆಳಿದ ರಾಜ್ಯ ಮನೆತನಗಳಾದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರ ಗತವೈಭವನ್ನು ಸಾರುವ ಕಾರ್ಯಕ್ರಮಗಳಿಗೆ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡಲಾಗಿದ್ದು, ಐತಿಹಾಸಿಕ ವಿಶೇಷ ಕಾರಿಡಾರ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಪಂಪನ ಆಶಯದಂತೆ ಈ ಭಾಗದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕದಂಬೋತ್ಸವ 2023ನ್ನು ಜ್ಯೋತಿ ಬೆಳಗಿಸಿ ಉದ್ಘಾಟಸಿ ಮಾತನಾಡಿದ ಅವರು, ಬನವಾಸಿಯು ಆದಿ ಕವಿ ಪಂಪ ಜನಿಸಿದ ನಾಡು. ಕನ್ನಡ ನಾಡಿಗೆ ಮುನ್ನುಡಿ ನೀಡಿದ ನಾಡಗಿದೆ. ಕದಂಬೋತ್ಸವನ್ನು ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ಇದೆ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ 3 ಸಾಹಿತಿಗಳಿಗೆ ಪಂಪ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದರು. ಬನವಾಸಿಯು ಸಾಹಿತ್ಯ, ಕಲೆಗೆ ಹೆಸರುವಾಸಿಯಾಗಿದೆ ಎಂದರು.
ಬನವಾಸಿ ಇಲ್ಲಿಯ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಧುಕೇಶ್ವರ ದೇವರ ಮಹಾಸ್ಯಂದನ ರಥವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ಲೋಕಾರ್ಪಣೆ ಮಾಡಿದರು.
ಶಿವರಾಮ ಹೆಬ್ಬಾರ್ ಅವರು ಮಾತನಾಡಿ, 70 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಮುಖ್ಯ ಮಂತ್ರಿಗಳು ಈ ವರ್ಷದ ಕದಂಬೋತ್ಸವ ಕಾರ್ಯಕ್ರಮಕ್ಕೆ 3 ಕೋಟಿ ನೀಡಿದ್ದಾರೆ ಎಂದರು.
Related Articles
ಪ್ರಶಸ್ತಿ ಪ್ರದಾನ:
ಪ್ರೊ. ಸಿ.ಪಿ ಕೃಷ್ಣ ಕುಮಾರ್ ಮೈಸೂರು, 20221-22ರ ಸಾಲಿನಲ್ಲಿ ಡಾ. ಬಾಬು ಕೃಷ್ಣಮೂರ್ತಿ ಬೆಂಗಳೂರು ಹಾಗೂ 2022-23ನೇ ಸಾಲಿನ ಪಂಪ ಪ್ರಶಸ್ತಿಗೆ ಎಸ್.ಆರ್. ರಾಮಸ್ವಾಮಿ ಬೆಂಗಳೂರು ಇವರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಪ್ರಶಸ್ತಿ ಸ್ವೀಕರಿಸಿದ ಡಾ. ಬಾಬು ಕೃಷ್ಣಮೂರ್ತಿ ಮಾತನಾಡಿ, ಪಂಪ ಪ್ರಶಸ್ತಿ ಲಭಿಸಿದ್ದು ಅತೀ ಸಂತೋಷ ಉಂಟುಮಾಡಿದೆ. ಪಂಪ ಪ್ರಶಸ್ತಿಯು ನನಗೆ ಅನಿರೀಕ್ಷಿತ ಎಂದರು.
ನೂರಾರು ಸಾಹಿತಿಗಳು ಇಂದಿಗೂ ಕವಿತೆ ಸಾಹಿತ್ಯ ಬರೆಯುತ್ತಿದ್ದು , ನಾನು ಕೂಡ ಸಾಹಿತ್ಯವನ್ನು ಬರೆಯಲು ಆರಂಭಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಾಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ, ವಿಧಾನ ಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕಿ ರೂಪಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ್ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ತಾಯಿ ಜೊತೆ ಮಲಗಿದ್ದ ಹಸುಗೂಸನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿ