ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಟು ಸತ್ಯವನ್ನು ಎದುರಿಸುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸುಳ್ಳು ಹೇಳಿದ್ದಾರೆಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಅವರು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಅವರೇ ನೇಮಿಸಿದ್ದ ನ್ಯಾ.ಕೆಂಪಣ್ಣ ಅವರ ಆಯೋಗವು ಸುದೀರ್ಘವಾಗಿ ಸಾûಾÂಧಾರಗಳನ್ನು ಕಲೆ ಹಾಕಿ ತನಿಖೆ ನಡೆಸಿದ ವರದಿಯನ್ನು ನಾನು ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ.
ಅಧಿಕಾರಿಗಳು ಕಡತ ತಂದರು ಅನುಮೋದಿಸಿದೆ ಎಂದು ಬರೆದಿರುವುದಾಗಿ ಅವರೇ ಹೇಳಿರುವುದರ ಅರ್ಥ, ತಪ್ಪು ಮಾಡಿರುವುದನ್ನು ಒಪ್ಪಿಕೊಂಡಂತೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ ಎಂದರು.
ಅಡ್ವೊಕೇಟ್ ಜನರಲ್ ಅವರ ವಾದದ ನಂತರ ನ್ಯಾಯಮೂರ್ತಿಗಳು ಏನು ಹೇಳಿದ್ದಾರೆ ಎನ್ನುವುದು ಮುಖ್ಯ. ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ಭ್ರಷ್ಟಾಚಾರವನ್ನು ರಕ್ಷಿಸಲು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನೇ ನಾನು ಹೇಳಿದ್ದು. ತೀರ್ಪು ಹಾಗೂ ಆಯೋಗದ ವರದಿಯನ್ನು ನಾನು ಓದಿದ್ದು. ಈಗಾಗಲೇ ಏನು ಕ್ರಮ ತೆಗೆದುಕೊಂದ್ದಾರೆ ಎಂದು ನಾವು ನೋಡಿದ್ದೇವೆ. ಇನ್ನು ಮುಂದೆ ನಾವೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದರು.