Advertisement

ಪೇಸಿಎಂ ಅಭಿಯಾನ ವಿರುದ್ಧ ಲಿಂಗಾಯತ ಅಸ್ತ್ರ; ಹೋರಾಟಕ್ಕೆ ಮುಂದಾಯಿತಾ ಸಮುದಾಯ?

11:46 PM Sep 24, 2022 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯದಲ್ಲಿ ಆರಂಭವಾದ ಪೇಸಿಎಂ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ಈಗ “ಲಿಂಗಾಯತ ಅಸ್ತ್ರ’ವನ್ನು ಪ್ರಯೋಗಿಸಿದೆ.

Advertisement

ಪೋಸ್ಟರ್‌ ಅಭಿಯಾನಕ್ಕೆ ತಿರುಗೇಟು ನೀಡಲು ಮುಂದಾದ ಬಿಜೆಪಿ, “ಇದು ಲಿಂಗಾಯತ ಸಮು ದಾಯದ ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರುವ ಪ್ರಯತ್ನ’ ಎಂದು ಬಿಂಬಿಸಲು ಮುಂದಾಗಿದೆ.

ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ. ಸುಧಾಕರ್‌, ಕಾಂಗ್ರೆಸ್‌ ಹಿಂದಿನಿಂದಲೂ ಪ್ರಬಲ ಸಮುದಾಯದವರ ವಿರುದ್ಧ, ಅದ ರಲ್ಲೂ ಲಿಂಗಾಯತ ಸಮುದಾಯದ ವಿರುದ್ಧ ಕೆಲಸ ಮಾಡುತ್ತಿದೆ. ವೀರೇಂದ್ರ ಪಾಟೀಲ್‌ ವಿರುದ್ಧವೂ ಇದೇ ರೀತಿ ನಡೆದಿತ್ತು ಎಂದು ಆರೋಪಿಸಿದ್ದಾರೆ.

ಇದರಿಂದಾಗಿಯೇ ಆ ಪಕ್ಷ ಅಧಿಕಾರಕ್ಕೆ ಬರುವ ಅಲ್ಪ ಅವಕಾಶವನ್ನೂ ಕಳೆದುಕೊಂಡಿದೆ. ಜನಸಾಮಾನ್ಯರೇ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

ಸಂಘಟನೆಗಳು ಸಿಎಂ ಪರ ಮತ್ತೊಂದೆಡೆ ವೀರಶೈವ- ಲಿಂಗಾಯತ ಸಮುದಾಯದ ಸಂಘಟನೆಗಳು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನಿಲ್ಲಲು ಮುಂದಾಗಿವೆ ಎಂದು ಹೇಳಲಾಗಿದೆ. ಆರೋಪ ಗಳ ಮೂಲಕ ಲಿಂಗಾಯತ ಮುಖ್ಯ ಮಂತ್ರಿಗೆ ಕೆಟ್ಟ ಹೆಸರು ತರಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ನಮ್ಮ ಶಕ್ತಿ ಪ್ರದರ್ಶಿಸೋಣ ಎಂಬ ಸಂದೇಶ ಸಾಮಾಜಿಕ ತಾಣಗಳಲ್ಲಿ ಹರಿಬಿಡುವ ಮೂಲಕ ಸಮುದಾಯ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

Advertisement

ರಾಜಕೀಯ ದುರುದ್ದೇಶ
ಈ ಮಧ್ಯೆ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಾರೆ ಎಂಬುದನ್ನು ತಿಳಿದು ವೀರಶೈವ ಲಿಂಗಾಯತ ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಒಡೆಯುವ ಕೆಲಸ ನಡೆದಿತ್ತು. ಪ್ರತೇಕ ಧರ್ಮದ ಬಗ್ಗೆ ಕೆಲವರಿಗೆ ಆಗ ನೆನಪಾಗಿತ್ತು. ಅದರಲ್ಲಿ ಒಳ್ಳೆಯ ಉದ್ದೇಶ ಇರಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಡೆಯಬೇಕಿತ್ತು. ಆದರೆ ಸಫ‌ಲ ರಾಗಲಿಲ್ಲ ಎಂದಿದ್ದಾರೆ.

ಸಚಿವ ಸುಧಾಕರ್‌ ಹೇಳಿಕೆ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ನಾನು ಅದರ ಭಾಗವಲ್ಲ. ಹಾಗಾಗಿ ಏನೂ ಹೇಳುವುದಿಲ್ಲ ಎಂದರು.

ಲಿಂಗಾಯತ ವಿರೋಧಿ ಸರಕಾರ : ಕಾಂಗ್ರೆಸ್‌ ಟೀಕೆ
ಜಾತಿ ಶೀಲ್ಡ್‌ ಹಿಡಿದು ಕಮಿಷನ್‌ ಭ್ರಷ್ಟಾಚಾರವನ್ನು ರಕ್ಷಿಸಲುಬಿಜೆಪಿ ವಿಫಲಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಟ್ವೀಟ್‌ಮೂಲಕ ಕುಟುಕಿದೆ. ಮಠಗಳ ಅನುದಾನದಲ್ಲೂ 30 ಪರ್ಸೆಂಟ್‌ ಕಮಿಷನ್‌ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು.

ಇದು ಲಿಂಗಾಯತರಿಗೆ ಮಾಡಿದ ಅವಮಾನ ವಲ್ಲವೇ? 40 ಪರ್ಸೆಂಟ್‌ ಸರಕಾರದ್ದು “ಜಾತ್ಯತೀತ ಭ್ರಷ್ಟಾಚಾರ’. ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ. 40 ಪರ್ಸೆಂಟ್‌ ಕಮಿಷನ್‌ಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ ಸಂತೋಷ್‌ ಪಾಟೀಲ್‌ ಕೂಡ ಲಿಂಗಾಯತ. ಅದೇ ಸಮುದಾಯದ ಜೀವ ತೆಗೆದ ಬಿಜೆಪಿ ಸರಕಾರ ಲಿಂಗಾಯತ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದೆ.

ಪೇಸಿಎಂ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್ಸಿ ನದ್ದು ಕೊಳಕು ರಾಜಕೀಯ. ಏನೇ ವಿಷಯವಿದ್ದರೂ ನೇರವಾಗಿ ಮಾತಾಡಬೇಕು, ದಾಖಲೆ ನೀಡ ಬೇಕು, ತನಿಖೆಯಾಗಬೇಕು. ಇದು ಅವರ ನೈತಿಕತೆಯ ಅಧ:ಪತನ ತೋರಿಸುತ್ತದೆ. -ಬಸವರಾಜ ಬೊಮ್ಮಾಯಿ, ಸಿಎಂ

ನನ್ನ ಹಾಗೂ ಡಿ.ಕೆ.ಶಿ. ಫೋಟೋ ಹಾಕಿ ಬಿಜೆಪಿ ಯವರು ಸಾಮಾಜಿಕ ಜಾಲತಾಣ, ಬುಕ್‌ ಮಾಡಿ ಬಿಡುಗಡೆ ಮಾಡಿ ದ್ದಾರಲ್ಲಾ, ಹಾಗಾದರೆ ಅವರು ಯಾವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇದು ವ್ಯಕ್ತಿ ಪ್ರಶ್ನೆಯಲ್ಲ, ಮುಖ್ಯಮಂತ್ರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅಭಿಯಾನ ಮಾಡುತ್ತಿದ್ದೇವೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಯವರ ಜನಪರ ಕಾರ್ಯ ಸಹಿಸದ ವಿಪಕ್ಷದವರು ಬೊಮ್ಮಾಯಿವರ ಚಾರಿತ್ರ್ಯಹರಣ ಮಾಡುತ್ತಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಕೈಗೊಳ್ಳುತ್ತೇವೆ.
-ಶಿವಕುಮಾರ್‌ ಆರ್‌. ಮೇಟಿ,
ಅಧ್ಯಕ್ಷರು, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ

 

Advertisement

Udayavani is now on Telegram. Click here to join our channel and stay updated with the latest news.

Next