Advertisement

ಆಡಳಿತ ಕನ್ನಡ ಜಾರಿಗೆ ಇದೇ ಅಧಿವೇಶನದಲ್ಲಿ ಪ್ರತ್ಯೇಕ ಕಾಯಿದೆ : ಸಿಎಂ ಭರವಸೆ

01:30 PM Sep 14, 2022 | Team Udayavani |

ಬೆಂಗಳೂರು : ಆಡಳಿತ ಕನ್ನಡ ಜಾರಿಗೆ ಇದೇ ವಿಧಾನಸಭೆ ಅಧಿವೇಶನದಲ್ಲಿ ಪ್ರತ್ಯೇಕ ಕಾಯಿದೆ ಜಾರಿಗೆ ತರುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಗೆ ಭರವಸೆ ನೀಡಿದ್ದಾರೆ.

Advertisement

ಜೆಡಿಎಸ್ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕನ್ನಡದ ಪರ ಇದ್ದೇನೆ. ಕನ್ನಡವನ್ನು ಬೆಳೆಸೋದ್ದಕ್ಕೆ ಸರ್ಕಾರ ಬದ್ದವಾಗಿದೆ.ಇದರಲ್ಲಿ ಯಾವ ಕಾರಣಕ್ಕೂ ರಾಜೀಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಭೂ ಕಬಳಿಕೆ ನಿಷೇಧ ವಿಧೇಯಕ ಮಂಡನೆ

ನೆಲ ಜಲ ಭಾಷೆ ವಿಷಯದಲ್ಲಿ ರಾಜಕೀಯ ಮೀರಿ ನಿರ್ಧಾರ ಮಾಡುತ್ತೇವೆ. ಕನ್ನಡ ಅಗ್ರಮಾನ್ಯ ಭಾಷೆ ಆಗಿದೆ. ಕನ್ನಡವನ್ನು ಹೆಚ್ಚು ಬಳಸಲು ಒಂದು ಪ್ರತ್ಯೇಕ ಕಾನೂನು ತರ್ತಿದ್ದೇವೆ. ಕನ್ನಡ ಕಡ್ಡಾಯ ಕ್ಕಾಗಿ ಒಂದು ಕಾನೂನನ್ನೇ ಜಾರಿ ಮಾಡ್ತಿದ್ದೇವೆ. ಇದೇ ಅಧಿವೇಶನದಲ್ಲಿ ಕಾಯಿದೆ ಜಾರಿ ಮಾಡುತ್ತೇವೆ ಎಂದು ಸದನಕ್ಕೆ ಭರವಸೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next