Advertisement

ಸಿಆರ್‌ಝಡ್‌ ವಿನಾಯಿತಿಗೆ ಅಸ್ತು : ಹೊಸದಿಲ್ಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

11:34 PM Jul 25, 2022 | Team Udayavani |

ಬೆಂಗಳೂರು : ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ವಿನಾಯಿತಿ ವಿಸ್ತರಣೆಗೆ ಚೆನ್ನೈಯ ಪ್ರಾದೇಶಿಕ ಕಚೇರಿ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

Advertisement

ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರಗತಿ ಯಲ್ಲಿ ಮಂಜೂರಾತಿ ಪಡೆಯಲು ಅವರು ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಗೋವಾ ಮತ್ತು ಕೇರಳ ಮಾದರಿಯಲ್ಲೇ ರಾಜ್ಯದಲ್ಲೂ ಸಿಆರ್‌ಝಡ್‌ನಿಂದ ವಿನಾಯಿತಿ ಸಿಗಲಿದೆ. ಸಮುದ್ರ ತೀರದಿಂದ 10 ಮೀ., ನದಿ ತೀರದಿಂದ 50 ಮೀ. ಗೆ ಸಿಆರ್‌ಝಡ್‌ ಇಳಿಕೆಗೆ ಕರಾವಳಿ ನಿರ್ವಹಣ ಯೋಜನೆಯಡಿ ಅನುಮತಿ ಕೇಳಲಾಗಿತ್ತು. ಅನುಮತಿ ಸಿಕ್ಕಿರುವುದರಿಂದ ಕರಾವಳಿ ಪ್ರದೇಶದ ಅಭಿವೃದ್ಧಿಯೊಂದಿಗೆ ಆರ್ಥಿಕತೆ, ಪ್ರವಾಸೋದ್ಯಮ, ಮೀನುಗಾರಿಕೆ ಸಹಿತ ವಿವಿಧ ಚಟುವಟಿಕೆಗಳಿಗೆ ಇಂಬು ದೊರಕಲಿದೆ ಎಂದು ತಿಳಿಸಿದರು.

ಕೇಂದ್ರ ಸಾರಿಗೆ ಸಚಿವರ ಜತೆ 5 ರಿಂಗ್‌ ರಸ್ತೆಗಳ ಬಗ್ಗೆ ಚರ್ಚಿಸಲಾಗಿದೆ. ರೈಲ್ವೇ ಮೇಲ್ಸೇತುವೆಗಳ ಸಹಿತ 24 ಪ್ರಸ್ತಾವ ನೆಗಳಿಗೆ ಮಂಜೂರಾತಿಯ ಭರವಸೆ ದೊರೆತಿದೆ. 2 ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಜವುಳಿ ಮತ್ತು ವಾಣಿಜ್ಯ ಕೈಗಾರಿಕಾ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದರು.

ಇನ್ನೆರಡು ತಿಂಗಳಲ್ಲಿ ಮಂಜೂರಾತಿ
ಬೈಂದೂರು, ಮಲ್ಪೆ ಮತ್ತು ಮಂಗಳೂರು ಮರೀನಾಗಳಲ್ಲಿ ಪ್ರವಾ ಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅನುದಾನ ನೀಡಲಾಗು ವುದು. ಪಿಪಿಪಿ ಮಾದರಿ ಕೈಗೊಳ್ಳಲು ಸೂಚಿಸಿದ್ದು, 8-10 ದಿನಗಳಲ್ಲಿ ಟೆಂಡರ್‌ ಕರೆಯಲಾಗುವುದು. ಕಾಳಿ ವಾಟರ್‌ ವೇ ಡಿಪಿಆರ್‌ ಕಳುಹಿಸಿದ ಕೂಡಲೇ ಮಂಜೂರಾತಿ ಆಗಲಿದೆ. ಅಂಗರಘಟ್ಟದಿಂದ ಮಣಿಪಾಲ ವಾಟರ್‌ ವೇ ಯೋಜನೆಯ ಸಮೀಕ್ಷೆ ಮತ್ತು ಡಿಪಿಆರ್‌ ಸಿದ್ಧವಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪ್ರಸ್ತಾವನೆಗೆ ಮಂಜೂರಾತಿ ನೀಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಗ್ಗೆ ತಜ್ಞರಿದ್ದರೆ ಅವರೊಂದಿಗೆ ಸಮಾಲೋಚಿಸುವುದಾಗಿ ತಿಳಿಸಿದರು.

ಹತ್ತು ಯೋಜನೆಗಳಿಗೆ ಅನುಮತಿ
ಸಾಗರಮಾಲಾ ಯೋಜನೆಯಡಿ 10 ಯೋಜನೆಗಳಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಇನ್ನು 10 ಯೋಜನೆಗಳಿಗೆ ಸ್ಪಷ್ಟೀಕರಣ ಕೇಳಲಾಗಿದ್ದು, ನೀಡಲಾಗಿದೆ. ಕೆಲವು ಪ್ರಸ್ತಾವನೆಗಳನ್ನು ಪರಿಷ್ಕರಿಸಿ ಕೊಡಲು ಸೂಚಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ 250 ಕೋಟಿ ರೂ.ಗಳ ಮಜಾಲಿ ಮೀನುಗಾರಿಕೆ ಬಂದರು, ಮೇರಿಟೈಮ್‌ ಮೀನುಗಾರಿಕೆ ತರಬೇತಿ ಸಂಸ್ಥೆಯ ಉದ್ದೇಶ ಮತ್ತು ಹೆಸರು ಬದಲಾಯಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next